ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ಮದೆ ಮಹೇಶ್ವರ ಕಾಲೇಜಿಗೆ ಶೇ 90, ಭಾಗಮಂಡಲದ ಕಾವೇರಿಪದವಿ ಪೂರ್ವ ಕಾಲೇಜಿಗೆ ಶೇ 91.25, ಮಡಿಕೇರಿಯ ಸೇಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿಗೆ ಶೇ 91.59, ನಗರದ ರಾಜೇಶ್ವರಿ ಪದವಿಪೂರ್ವ ಕಾಲೇಜಿಗೆ ಶೇ 90, ಮೂರ್ನಾಡು ಮಾರುತಿ ಪದವಿಪೂರ್ವ ಕಾಲೇಜಿಗೆ ಶೇ 92.68, ವಿರಾಜಪೇಟೆಯ ಸೇಂಟ್ ಅನ್ನಮ್ಮ ಪದವಿಪೂರ್ವ ಕಾಲೇಜಿಗೆ ಶೇ 97, ಗೋಣಿಕೊಪ್ಪಲು ಲಯನ್ಸ್ ಪದವಿ ಪೂರ್ವ ಕಾಲೇಜಿಗೆ ಶೇ 93, ಗೋಣಿ ಕೊಪ್ಪಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿಗೆ ಶೇ 96, ಗೋಣಿಕೊಪ್ಪಲು ಕೈಕೇರಿ ಕಾಲ್ಸ್ ಪಿಯು ಕಾಲೇಜು ಶೇ 92, ಕುಶಾಲನಗರದ ವಿವೇಕಾನಂದ ಕಾಲೇಜಿಗೆ ಶೇ 96, ಶನಿವಾರಸಂತೆಯ ವಿಘ್ನೇಶ್ವರ ಪದವಿಪೂರ್ವ ಕಾಲೇಜಿಗೆ ಶೇ 94.17 ಫಲಿತಾಂಶ ಲಭಿಸಿದೆ.