ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶನಿವಾರಸಂತೆ | ಪುತ್ರನಿಂದ ಅಪಘಾತ: ತಾಯಿ ಬಂಧನ

Published 12 ಜೂನ್ 2024, 19:47 IST
Last Updated 12 ಜೂನ್ 2024, 19:47 IST
ಅಕ್ಷರ ಗಾತ್ರ

ಶನಿವಾರಸಂತೆ (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ರಸ್ತೆಯಲ್ಲಿ 16 ವರ್ಷದ ಬಾಲಕ ಬೈಕ್‌ ಚಾಲನೆ ಮಾಡಿ, ಪಾದಚಾರಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ, ಬಾಲಕನಿಗೆ ಬೈಕ್ ನೀಡಿದ ತಾಯಿ ಯಶೋಧಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಚಂಗಡಹಳ್ಳಿಯ ನಿವಾಸಿಯಾದ ಬಾಲಕ, ಜೂನ್ 1ರಂದು ರಾತ್ರಿ ಬೈಕ್‌ನಿಂದ ಗುದ್ದಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪಾದಚಾರಿ ಜಯಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಲಕನ ತಾಯಿಯನ್ನು ಬಂಧಿಸಿದರು. ನ್ಯಾಯಾಧೀಶರು ಬಾಲಕನನ್ನು ಸುಧಾರಣೆಗಾಗಿ 11 ದಿನಗಳ ಕಾಲ ಮೈಸೂರಿನ ಸರ್ಕಾರಿ ವೀಕ್ಷಣಾಣಾಲಯಕ್ಕೆ ಕಳಿಸಿದರು. ‘ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT