ಸುಂಟಿಕೊಪ್ಪ: ಉಡುಪಿಯಿಂದ ಕೊಯಮತ್ತೂರಿಗೆ ಹೊರಟಿದ್ದ ಆದಿಯೋಗಿ ರಥಯಾತ್ರೆಯನ್ನುಇ ಸುಂಟಿಕೊಪ್ಪದ ಗದ್ದೆಹಳ್ಳದ ಗಾಂಧಿ ವೃತ್ತದಲ್ಲಿ ಅದ್ದೂರಿ ಸ್ವಾಗತದಿಂದ ಬರ ಮಾಡಿಕೊಂಡರು.

ಗದ್ದೆಹಳ್ಳದಿಂದ ನೂರಾರು ಸಂಖ್ಯೆಯಲ್ಲಿ ನೇರಿದ್ದ ಭಕ್ತರು ರಥವನ್ನು ಚಂಡೆವಾದ್ಯ ಮತ್ತು ಜಯಘೋಷದೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಎಳೆದು ತರಲಾಯಿತು.

ನಂತರ ರಾಮ ಮಂದಿರದಲ್ಲಿ ಹಿರಿಯ ಅರ್ಚಕ ಹಾ.ಮಾ.ಗಣೇಶ್ ಶರ್ಮಾ ಅವರ ನೇತೃತ್ವದಲ್ಲಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟದಲ್ಲಿ ರಾತ್ರಿ ತಂಗಿ ವಿಶ್ರಾಂತಿ ಪಡೆದರು.
ಬೆಳಿಗ್ಗೆ ಧ್ಯಾನ, ಯೋಗದ ನಂತರ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ರಾಮಮಂದಿರದಿಂದ ಹೊರಟು ಭಕ್ತರು ರಥವನ್ನು ಎಳೆದು ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬಳಿ ಪೂಜೆಯನ್ನು ಸ್ವೀಕರಿಸಿದ ಬಳಿಕ ಕೊಡಗರಹಳ್ಳಿ ಶ್ರೀ.ಬೈತೂರಪ್ಪ ದೇವಾಲಯಕ್ಕೆ ಆಗಮಿಸಿತು.

ಅಲ್ಲಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಳಿಕ ದ್ಯಾನ ಭಜನೆಯ ಮೂಲಕ ಕೊಡಗರಹಳ್ಳಿ ಮಾರುತಿ ನಗರದ ಶ್ರೀ. ಆಂಜನೇಯ ದೇವಸ್ಥಾನ 7 ನೇ ಹೊಸಕೋಟೆ ಯ ಶ್ರೀ.ಮಹಾಗಣಪತಿ ಮತ್ತು ಶ್ರೀ. ಕೃಷ್ಣ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಲಾಯಿತು.

ನಂತರ ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೆಬಲ್ ಟ್ರಸ್ಟ್ನಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಆಯಾ ವ್ಯಾಪ್ತಿಯ ದೇವಸ್ಥಾನ ಸೇವಾ ಸಮಿತಿಗಳು ವಿವಿಧ ಸಂಘಟನೆಗಳು ರಥವನ್ನು ಎಳೆಯಲು ಕೈ ಜೋಡಿಸಿದ್ದು ಮಾತ್ರವಲ್ಲದೆ ಮನೆ ಮತ್ತು ವಾಣಿಜ್ಯ ಮಳಿಗೆಗಳ ಮುಂದೆ ಹಾದು ಹೋಗುವಾಗ ಈಡುಗಾಯಿ ಹೊಡೆದು ಅರತಿ ಎತ್ತಿ ಭಕ್ತಿಯಿಂದ ನಮಿಸಿದ್ದು ಕಂಡುಬಂತು.

ಗುಡ್ಡೆಹೊಸೂರು ಮಾರ್ಗವಾಗಿ ಕುಶಾಲನರ ತಲುಪಿ, ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿಶ್ರಾಂತಿ ಪಡೆಯಲಾಯಿತು. ಈ ರಥಯಾತ್ರೆಯು ಬೆಟ್ಟದಪುರ, ಕೆ.ಆರ್.ನಗರ ಮಾರ್ಗವಾಗಿ ಮೈಸೂರು ತಲುಪಲಿದ್ದು, ಫೆ.13 ರಂದು ಕೊಯಮತ್ತೂರಿನಲ್ಲಿರುವ ಈಶ ಆದಿಯೋಗಿ ಕೇಂದ್ರದಲ್ಲಿ ಮಹಾಶಿವರಾತ್ರಿಯಂದು ಸಮಾಪ್ತಿಗೊಳ್ಳಲಿದೆ.

ಭಕ್ತಿಯ ಸಾರಥ್ಯದಲ್ಲಿ ಆದಿಯೋಗಿ ರಥವು ತನ್ನ ಒಂದು ಸಾವಿರ ಕಿ.ಮೀ. ಶಿವಯಾತ್ರೆಯನ್ನು ದೇವಾಲಯಗಳ ನಗರ ಉಡುಪಿಯಿಂದ ಡಿ.7 ರಂದು ಪ್ರಾರಂಭಿಸಿದ್ದು ಸದ್ಗುರುಗಳು ಮಹಾಶಿವರಾತ್ರಿಗೆ ಶಿವಾಂಗ ಸಾಧನದ ಭಾಗವಾಗಿ ಈ ರಥಯಾತ್ರೆ ಇದ್ದು ಶಿವಾಂಗ ಸಾಧನವು ಆಂತರ್ಯದಲ್ಲಿರುವ ಭಕ್ತಿಯನ್ನು ಪೊಷಿಸುವ ಆದಿಯೋಗಿಯಾದ ಶಿವನತ್ತ ಗ್ರಹಣ ಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಶಕ್ತಿಯುತ ಯೋಗ ಪ್ರಕ್ರಿಯೆಯಾಗಿದೆ. ಆದಿಯೋಗಿ ರಥವು ಆದಿಯೋಗಿಯ ಸಾನ್ನಿಧ್ಯವನ್ನು ರಾಜ್ಯದ್ಯಾಂತ ಹೊತ್ತು ಸಾಗುತ್ತಿದ್ದು, ಭೇಟಿ ನೀಡುವ ಪ್ರತಿ ಊರಿನಲ್ಲಿಯೂ ಭಕ್ತಿ ಯೋಗಭ್ಯಾಸಗಳು ನಿವೇದನೆ ಮತ್ತು ಆರ್ಪಣೆಯ ಮನೋಭಾವ ಹೆಚ್ಚಿಸುತ್ತದೆ ಎಂದು ಶಿವಯಾತ್ರೆಯ ಸಂಘಟಕರು ತಿಳಿಸಿದರು. ಕೊಡಗಿನಲ್ಲಿ ದೊರೆತ ಅಭೂತಪೂರ್ವ ಸ್ವಾಗತ, ಭಕ್ತಿ ಮತ್ತು ಪ್ರೀತಿಯನ್ನು ಸದಾ ಸ್ಮರಿಸುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.