ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಟೂರ್ನಿ: ಅಜ್ಜೆಟ್ಟಿರ, ದೇಯಂಡಕ್ಕೆ ಜಯ

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ
Published 5 ಏಪ್ರಿಲ್ 2024, 6:40 IST
Last Updated 5 ಏಪ್ರಿಲ್ 2024, 6:40 IST
ಅಕ್ಷರ ಗಾತ್ರ

ನಾಪೋಕ್ಲು: ಅಜ್ಜೆಟ್ಟಿರ, ಪಟ್ಟಚೆರುವಾಳಂಡ ಹಾಗೂ ದೇಯಂಡ ತಂಡಗಳು ಕುಂಡ್ಯೋಳಂಡ ಕಪ್‌ಗಾಗಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಗುರುವಾರ ಗೆಲುವು ಸಾಧಿಸಿದವು.

ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ, ಅಜ್ಜೆಟ್ಟಿರ ತಂಡದವರು ಬಟ್ಟಿರ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3–2 ಗೋಲುಗಳ ಅಂತರದಲ್ಲಿ ಮಣಿಸಿದರೆ, ಪಟ್ಟಚೆರುವಾಳಂಡ ತಂಡದವರು ಮಳವಂಡ ತಂಡದ ವಿರುದ್ಧ 5–4 ಗೋಲುಗಳಿಂದ ಜಯ ಗಳಿಸಿದರು.

ದೇಯಂಡ ತಂಡದವರು ಓಡಿಯಂಡ ತಂಡದ ವಿರುದ್ಧ 3-2 ಗೋಲುಗಳಿಂದ ಜಯ ಸಾಧಿಸಿದರು.

ಫಲಿತಾಂಶ: ತಿರುತೆರ ತಂಡವು 3-0ರಿಂದ ಮುಕ್ಕಾಟಿರ (ಕುಂಬಳದಾಳು) ತಂಡದ ವಿರುದ್ಧ; ಬೋಳಿಯಾಡಿರ ತಂಡವು 1–0ರಿಂದ ಅಳ್ತಂಡ ವಿರುದ್ಧ; ಪೊಂಜಂಡ ತಂಡವು 1-0ರಿಂದ ಪೊನ್ನಕಚ್ಚಿರ ವಿರುದ್ಧ; ಬಡ್ಡೀರ ತಂಡವು 1–0ರಿಂದ ಚಾರಿಮಂಡದ ವಿರುದ್ಧ; ಕಾಲಚಂಡ ತಂಡವು 1–0 ಅಂತರದಿಂದ ಬೊಳ್ಳಚೆಟ್ಟೀರ ತಂಡದ ವಿರುದ್ಧ; ಮುಕ್ಕಾಟಿರ (ಕುಂಜಲಗೇರಿ) ತಂಡವು 3–1 ಅಂತರದಿಂದ ಕಳ್ಳೀರ ತಂಡದ ವಿರುದ್ಧ; ಮಾಪಂಗಡ ತಂಡವು 2-1ರಿಂದ ಕುಂಡಚ್ಚಿರ ತಂಡದ ವಿರುದ್ಧ; ಕಾಲಚಂಡ ತಂಡವು 1-0 ರಿಂದ ಬೊಳ್ಳ ಚೆಟ್ಟಿರ ವಿರುದ್ಧ; ದಾಸಂಡ ತಂಡವು 3–0ರಿಂದ ಅಪಾಡಂಡ ವಿರುದ್ಧ; ಮಲ್ಲಜ್ಜಿರ ತಂಡವು 5–0 ಅಂತರದಿಂದ ಪೆಬ್ಬೆಟ್ಟಿರ ವಿರುದ್ಧ ಹಾಗೂ ಮಲ್ಲಂಡ ತಂಡವು 3-0 ಗೋಲುಗಳಿಂದ ಬಾಚಿರ ವಿರುದ್ಧ ಗೆಲುವು ಸಾಧಿಸಿದವು.

ನಿಡುಮಂಡ, ಕೊಟ್ಟಂಗಡ, ಮಚ್ಚಾರಂಡ ಹಾಗೂ ಪಳಂಗಿಯಂಡ ತಂಡಗಳು ವಾಕ್‌ಓವರ್ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT