ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಬಾಡಗರಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 125ನೇ ವರ್ಷ ಪೂರೈಸಿದ ಹಿನ್ನೆಲೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಶಾಲಾ ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು, ಶಿಕ್ಷಕರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ವಿನೂತನವಾಗಿ ಆಚರಿಸಲಾಯಿತು.

125ನೇ ವರ್ಷದ ನೆನಪಿಗಾಗಿ ಶಾಲೆಗೆ ಹೊಸದಾಗಿ ಆಟದ ಮೈದಾನವನ್ನು ನಿರ್ಮಿಸಿ, ಶಾಲೆಗೆ ಜಾಗದಾನ ನೀಡಿದ ಮಲ್ಲೇಂಗಡ ಕುಟುಂಬಸ್ಥರ ಪರವಾಗಿ ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಮಲ್ಲೇಂಗಡ ದಾದಾ ಬೆಳ್ಯಪ್ಪ ಮತ್ತು ಗಾಂಧಿ ಕಾರ್ಯಪ್ಪ ಅವರನ್ನು ಗೌರವಿಸಲಾಯಿತು.

ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಲ್ಯಮೀದೇರಿರ ಸಂಪತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮು ಧ್ವಜಾರೋಹಣ ನೆರವೇರಿಸಿದರು.

ಆಟೋಟಗಳ ಸ್ಪರ್ಧೆಯನ್ನು ಶಾಲೆಯ ಆಡಳಿತ ಮಂಡಳಿಯ ಹಿರಿಯರಾದ ಮಲ್ಲೇಂಗಡ ಪೆಮ್ಮಯ್ಯ ಉದ್ಘಾಟಿಸಿದರು.

ವಿದ್ಯಾರ್ಥಿಗಳಿಂದ ಕವಾಯಿತು ಹಾಗೂ ದೈಹಿಕ ವ್ಯಾಯಾಮದ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ಮ್ಯೂಸಿಕಲ್ ಚೇರ್, ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕ್ರೀಡಾ ಸ್ಪೂರ್ತಿ ಮೆರೆದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮು, ನಿವೃತ್ತ ಶಿಕ್ಷಕ ಮೀದೇರಿರ ಕಾರ್ಯಪ್ಪ, ಮಲ್ಲೇಂಗಡ ಪೂಣಚ್ಚ, ಮಲ್ಲೇಂಗಡ ಗಾಂಧಿ ಕಾರ್ಯಪ್ಪ, ಹಾಗೂ ಶಾಲಾ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಲ್ಯಮೀದೇರಿರ ಸಂಪತ್, ಉಪಾಧ್ಯಕ್ಷ ಮೀದೇರಿರ ಮಂಜುನಾಥ್, ಖಜಾಂಚಿ ಕಾಯಪಂಡ ಸುನಿಲ್, ಟಿ.ಶೆಟ್ಟಿಗೇರಿ ಕ್ಲಸ್ಟರ್ ಸಿಆರ್ ಪಿ ಕೋಪುಡ ಸೌಮ್ಯ, ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮ್ಮತ್ತಿರ ರಾಜೇಶ್, ಸದಸ್ಯರಾದ ಮಲ್ಲೇಂಗಡ ರೀನಾ,ಗೌರಿ, ಕಾಳಿಯಮ್ಮ ದಾನಿಗಳಾದ ಬಲ್ಯ ಮೀದೇರಿರ ಶಿವ ಕುಮಾರ್, ಮೀದೇರಿರ ಪೆಮ್ಮಯ್ಯ, ಸಮಿತಿ ಸದಸ್ಯರಾದ ಅಣ್ಣೀರ ವಿಜು ಪೂಣಚ್ಚ, ಕಾಯಪಂಡ ಮಧು ಮೋಟಯ್ಯ, ಅಣ್ಣೀರ ಲೋಕೇಶ್, ಮಲ್ಲೇಂಗಡ ನರೇಂದ್ರ, ಅಣ್ಣೀರ ರೂಪ, ಅಣ್ಣೀರ ಮಿಥುನ,ಜಾಜಿ ಪೂಣಚ್ಚ, ಮಲ್ಲಿಗೆ ಪೂಣಚ್ಚ, ಮಲ್ಲೇಠಗಡ ಜಯ,ಪೂಜಾ ಲೋಕೇಶ್, ಬಲ್ಯಮೀದೇರೀರ ಕಾವೇರಮ್ಮ, ಕೌಶಿ ಮಂಜು, ಸರಸ್ವತಿ, ಮುಖ್ಯ ಪ್ರಭಾರ ಶಿಕ್ಷಕಿ ಆಶಾ ಹಾಜರಿದ್ದರು.

ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.