ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ಮಕ್ಕಳ ಗುಡಿ ಬೆಟ್ಟ: ಸ್ವಚ್ಛತಾ ಕಾರ್ಯ

Published 27 ಮೇ 2024, 5:58 IST
Last Updated 27 ಮೇ 2024, 5:58 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಕ್ಕಳ ಗುಡಿ ಬೆಟ್ಟಕ್ಕೆ ತೆರಳುವ ರಸ್ತೆ ಎರಡೂ ಬದಿಯಲ್ಲಿ ಕಾಡು ಬೆಳೆದು, ಅಲ್ಲಲ್ಲಿ ಇದ್ದ ತ್ಯಾಜ್ಯದ ರಾಶಿಯನ್ನು ಬೆಂಗಳೂರಿನ ಉದ್ಯಮಿಯೊಬ್ಬರು ಭಾನುವಾರ ಜೆಸಿಬಿ ಮೂಲಕ ಸ್ವಚ್ಛಗೊಳಿಸಿದರು.

ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಪ್ರವಾಸಿ ತಾಣಕ್ಕೆ ಹೊರ ಊರು ಮತ್ತು ಜಿಲ್ಲೆಯಿಂದ ಸಾಕಷ್ಟು ಪ್ರವಾಸಿಗರು ಆಗಮಿಸಿ ಪ್ರಕೃತ್ತಿ ಸೊಬಗು ಸವಿಯುತ್ತಾರೆ.

ಆದರೆ, ಮಕ್ಕಳಗುಡಿ ವ್ಯೂ ಪಾಯಿಂಟ್ ನಲ್ಲಿ ಯಾವುದೇ ರೀತಿಯ ಸುರಕ್ಷತೆ ಇಲ್ಲ. ಎಲ್ಲೆಂದರಲ್ಲಿ ಮದ್ಯದ ಬಾಟಲು, ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ, ಇಲ್ಲಿಗೆ ಆಗಮಿಸುವ ರಸ್ತೆಯ ಎರಡೂ ಬದಿಯ ಕಾಡು ರಸ್ತೆಯನ್ನು ಆಕ್ರಮಿಸಿಕೊಂಡಿತ್ತು. ಇದರ ಸ್ವಚ್ಛತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮುಂದಾಗದಿರುವುದರಿಂದ, ಪ್ರವಾಸಿಗರು ಕಷ್ಟದಲ್ಲಿ ಈ ಸ್ಥಳಕ್ಕೆ ಆಗಮಿಸುತ್ತಿದ್ದರು.

ಎಲ್ಲಿ ನೋಡಿದರೂ ಮದ್ಯದ ಬಾಟಲಿಗಳು. ಸಂಜೆಯಾದರೆ ಬೆಟ್ಟಕ್ಕೆ ಹೋಗಲು ಭಯ ಎಂದು ಸಾರ್ವಜನಿಕರ ದೂರಾಗಿತ್ತು.

ಉದ್ಯಮಿ ಸುರೇಶ್ ಮಾತನಾಡಿ, ‘ಮಕ್ಕಳಗುಡಿ ಬೆಟ್ಟವು ನಿರ್ವಹಣೆ ಇಲ್ಲದೆ ರಸ್ತೆಯಲ್ಲಿ ಗಿಡಗಂಟೆಗಳು ಬೆಳೆದು ದಾರಿಯೇ ಕಾಣದಾಗಿತ್ತು. ಪುಂಡಪೋಕರಿಗಳ ಆವಾಸ ಸ್ಥಳವಾಗಿದೆ. ಸಾರ್ವಜನಿಕರಿಗೂ, ಪ್ರವಾಸಿಗರಿಗೂ ಹೋಗದಂತ ಪರಿಸ್ಥಿತಿ ಇತ್ತು. ಇದರ ಬಗ್ಗೆ ಸ್ಥಳೀಯ ಪಂಚಾಯಿತಿ ಬಗ್ಗೆ ಗಮನ ಹರಿಸಬೇಕು. ಇಲ್ಲಿನ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದರ ಸ್ವಚ್ಛತೆಗೆ ಗಮನ ಹರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT