ಸೈನಿಕ ಶಾಲೆಗೆ ಯುದ್ಧ ಟ್ಯಾಂಕರ್ ಕೊಡುಗೆ

7

ಸೈನಿಕ ಶಾಲೆಗೆ ಯುದ್ಧ ಟ್ಯಾಂಕರ್ ಕೊಡುಗೆ

Published:
Updated:
Deccan Herald

ಕುಶಾಲನಗರ: ಸಮೀಪದ ಕೂಡಿಗೆ ಕೃಷಿ ಫಾರಂ ಆವರಣದ ಕೊಡಗು ಸೈನಿಕ ಶಾಲೆಗೆ ಭಾರತೀಯ ಸೇನೆ ಕೊಡುಗೆಯಾಗಿ ನೀಡಿರುವ ಯುದ್ಧ ಟ್ಯಾಂಕರ್‌ ಅನ್ನು ಶುಕ್ರವಾರ ಅನಾವರಣ ಮಾಡಲಾಯಿತು.

ಯುದ್ಧ ಟ್ಯಾಂಕರ್‌ 1950ರಲ್ಲಿ ರಷ್ಯಾ ಸೇನೆಯ ಸೇವೆಗೆ ಸೇರ್ಪಡೆಗೊಂಡಿತ್ತು. ನಂತರ, 1960ರಲ್ಲಿ ಭಾರತೀಯ ಸೇನೆಯ ಸೇವೆಗೆ ಸೇರಿತು. ಇದು ಸೋವಿಯತ್ ಯೂನಿಯನ್‌ನಿಂದ ಭಾರತೀಯ ಸೇನೆಗೆ ಕೊಡುಗೆಯಾಗಿ ನೀಡಿದ್ದ ಮೊದಲನೇ ಯುದ್ಧ ಟ್ಯಾಂಕ‌ರ್‌ ಆಗಿದೆ. ಜೊತೆಗೆ ಈ ಯುದ್ಧ ಟ್ಯಾಂಕರ್‌ 1971ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಪಂಜಾಬ್ ಪ್ರಾಂತ್ಯದ ಫಜಿಲ್ಕಾ ಜಿಲ್ಲೆಯಲ್ಲಿ ಶತ್ರುಗಳನ್ನು ಎದುರಿಸಲು ಬಳಕೆ ಮಾಡಲಾಗಿತ್ತು. ವಿಶೇಷತೆಯೆಂದರೆ ಇದು 100 ಎಂಎಂ ಗನ್‌ ಹೊಂದಿದ್ದು, 14 ಕಿ.ಮೀ. ವ್ಯಾಪ್ತಿಯಲ್ಲಿ ತನ್ನ ಗುರಿಯನ್ನು ತಲುಪುವ ಸಾಮರ್ಥ್ಯವಿತ್ತು. ಇದರೊಂದಿಗೆ 7.62 ಎಂಎಂ ಹಾಗೂ 12.7 ಎಂಎಂ ಮಷಿನ್ ಗನ್‌ಗಳನ್ನೂ ಒಳಗೊಂಡಿದ್ದು, ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವೂ ಇದಕ್ಕಿದೆ. ಸೇನೆಯು ಬಳಸಿದ ಟ್ಯಾಂಕರ್‌ ಅನ್ನು ಸೈನಿಕ ಶಾಲೆಗೆ ನೀಡಲಾಗಿದೆ.

ನಿವೃತ್ತ ಮೇಜರ್ ಜನರಲ್ ವಿ.ಪಿ.ಎಸ್. ಭಕುನಿ ಮಾತನಾಡಿ, ಸೈನಿಕ ಶಾಲೆಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯಲ್ಲಿ ಏಳು ವರ್ಷಗಳ ಶಿಕ್ಷಣ ಪೂರೈಸಿದ ನಂತರ ಸೇನಾ ಅಧಿಕಾರಿಯಾಗುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.

ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್. ಆರ್. ಲಾಲ್, ಉಪ ಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು, ಹಿರಿಯ ಶಿಕ್ಷಕ ಸೂರ್ಯನಾರಾಯಣ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !