ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಕೋವಿಡ್‌ನಿಂದ ಮತ್ತೊಂದು ಸಾವು

ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆ
Last Updated 18 ಜುಲೈ 2020, 13:50 IST
ಅಕ್ಷರ ಗಾತ್ರ

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಹುದಿಕೇರಿಯ ಹೈಸೊಡ್ಲೂರು ಗ್ರಾಮದ 58 ವರ್ಷದ ಪುರುಷರೊಬ್ಬರು ಜುಲೈ 14ರಂದು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರವು ಮುಗಿದಿದ್ದು ಅಂದೇ ಅವರ ಗಂಟಲು ಮಾದರಿ ಸಂಗ್ರಹಿಸಲಾಗಿತ್ತು. ಅದರ ವರದಿಯೂ ಶನಿವಾರ ಬಂದಿದ್ದು ಇವರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರಾದವರ ಸಂಖ್ಯೆ 5ಕ್ಕೆ ಏರಿದೆ.

ಉಳಿದಂತೆ ವಿರಾಜಪೇಟೆ ತಾಲ್ಲೂಕಿನ ಅಪ್ಪಯ್ಯ ಸ್ವಾಮಿ ರಸ್ತೆಯ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿದ್ದ 35 ವರ್ಷದ ಪುರುಷ ಮತ್ತು 14 ವರ್ಷದ ಬಾಲಕ, 64 ವರ್ಷದ ಪುರುಷ ಮತ್ತು 60 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.

ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಬಳಿಯ ಟಿ.ಜಾನ್ ಲೇಔಟ್‍ನ 27 ವರ್ಷದ ಪುರುಷ, ಗೋಣಿಕೊಪ್ಪಲು 56 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತರಿಗೂ ಸಹ ಸೋಂಕು ದೃಢಪಟ್ಟಿದೆ.

ಮಡಿಕೇರಿಯ ತಾಳತ್‍ಮನೆಯ 2ನೇ ಕ್ರಾಸ್ ನಿವಾಸಿ ಬೆಂಗಳೂರು ಪ್ರಯಾಣದ ಇತಿಹಾಸವಿರುವ 43 ವರ್ಷದ ಪುರುಷನಿಗೂ ಸೋಂಕು ದೃಢವಾಗಿದೆ. ಕುಶಾಲನಗರದ ಕಣಿವೆಯ ಬೋಣಿಗೇರಿ ಗ್ರಾಮದ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 25 ವರ್ಷ ಪ್ರಾಯದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ, ಹುದಿಕೇರಿಯ ಹೈಸೊಡ್ಲೂರು, ಮಡಿಕೇರಿಯ ಟಿ.ಜಾನ್ ಲೇಔಟ್, ಮಡಿಕೇರಿಯ ತಾಳತ್‍ಮನೆಯ 2ನೇ ಕ್ರಾಸ್, ಕುಶಾಲನಗರದ ಕಣಿವೆಯ ಬೋಣಿಗೇರಿ ಗ್ರಾಮದಲ್ಲಿ ಕಂಟೈನ್‍ಮೆಂಟ್ ವಲಯ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT