ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ| ಹೆಣ್ಣು ಮಕ್ಕಳಿರುವುದಕ್ಕೆ ಹೆಮ್ಮೆ ಪಡಿ: ಅನೀಸ್ ಕಣ್ಮಣಿ ಜಾಯ್

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಗರ್ಲ್ಸ್ ಗೋಡೆಯಲ್ಲಿ ಅನಿಸಿಕೆ ಹಂಚಿಕೊಂಡ ಅಧಿಕಾರಿಗಳು
Last Updated 24 ಜನವರಿ 2020, 15:50 IST
ಅಕ್ಷರ ಗಾತ್ರ

ಮಡಿಕೇರಿ: ಹೆಣ್ಣು ಸಂಸಾರದ ಕಣ್ಣು, ಮನೆಯಲ್ಲಿ ಹೆಣ್ಣು ಮಕ್ಕಳಿರುವುದಕ್ಕೆ ಹೆಮ್ಮೆ ಪಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶುಕ್ರವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ‘ಮಗಳನ್ನು ಉಳಿಸಿ ಮಗಳನ್ನು ಓದಿಸಿ’ ಎಂಬ ಘೋಷವಾಕ್ಯದೊಂದಿಗೆ ನಡೆದ ಬರಹ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸರವರು ತಮ್ಮ ಅನಿಸಿಕೆಯನ್ನು ಗರ್ಲ್ಸ್ ಗೋಡೆಯಲ್ಲಿ ಬರೆದು ಅಂಟಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿಗಳಿಂದ ಕೇಕ್ ಕತ್ತರಿಸಿ ಅಧಿಕಾರಿಗಳು ಮಕ್ಕಳಿಗೆ ಕೇಕ್ ತಿನ್ನಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಶುಭಾಷಯವನ್ನು ಕೋರಿದರು.

ಕೊಡಗಿನ ಎಲ್ಲಾ ಅಮೂಲ್ಯ ಹೆಣ್ಣು ಮಕ್ಕಳನ್ನು ನಾವು ಪ್ರೀತಿಸುತ್ತೇವೆ, ನಿಮ್ಮನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಗರ್ಲ್ಸ್ ಗೋಡೆಯಲ್ಲಿ ಅಂಟಿಸಲು ನನ್ನ ಅನಿಸಿಕೆಯನ್ನು ಬರೆದಿದ್ದೇನೆ ಮತ್ತು ನನಗೆ ಹೆಣ್ಣು ಮಗಳಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ ಎಂದು ಅನೀಸ್ ಕಣ್ಮಣಿ ಜಾಯ್ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಹೆಣ್ಣಾಗಿ ಯಾವ ರೀತಿ ಕೆಲಸ ನಿರ್ವಹಿಸಬಹುದೆಂದು ನಾನು ನೋಡಿದ್ದೇನೆ. ಯಾವುದೇ ಕೆಲಸ ಕಷ್ಟಕರ ಎಂದು ಅಂದುಕೊಳ್ಳಬಾರದು. ಸಮಾಜದಲ್ಲಿ ಕೆಲವು ಕೆಲಸಗಳು ಕೆಲವರಿಗೆ ಮಾತ್ರ ಎಂಬ ಪೂರ್ವಾಗ್ರಹಗಳನ್ನು ತೆಗೆದು ಹಾಕಬೇಕು. ಪೋಷಕರು ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಹೆಣ್ಣು ಮಕ್ಕಳಲ್ಲಿ ಸಕರಾತ್ಮಾಕ ಚಿಂತನೆಗಳನ್ನು ಬೆಳಸಿಕೊಳ್ಳಲು ಪ್ರೋತ್ಸಾಹಿಸಬೇಕು, ಮಹಿಳಾ ಸಬಲೀಕರಣವನ್ನು ದೀಮಂತಗೊಳಿಸೋಣ, ಹೆಣ್ಣು ಮಗಳಾಗಿ, ತಾಯಿಯಾಗಿ, ಪತ್ನಿಯಾಗಿ, ಅತ್ತೆಯಾಗಿ ಪರಿಪೂರ್ಣತೆಯನ್ನು ಗಳಿಸಿಕೊಂಡಿರುವ ಅಪೂರ್ವ ವ್ಯಕ್ತಿತ್ವವಾಗಿದ್ದು, ಅವಳು ಹಿರಿಯ ಗರಿಮೆಗೆ ಯಾವುದೇ ಸರಿಸಾಟಿಯಿಲ್ಲ ಹೆಣ್ಣಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಪಡೋಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ ಕೂಡ ತಮ್ಮ ಅನಿಸಿಕೆಯನ್ನು ಗರ್ಲ್ಸ್ ಗೋಡೆಯಲ್ಲಿ ಅಂಟಿಸಿದರು.

ಗರ್ಲ್ಸ್ ಗೋಡೆಯಲ್ಲಿ ಉತ್ತಮ ನಾಳೆಗಾಗಿ ಅತ್ಯುತ್ತಮ ಆಲೋಚನೆಯ ಬಗ್ಗೆ 2–3 ಸಾಲಿನಲ್ಲಿ ಸಾರ್ವಜನಿಕರಿಗೆ ಅಭಿಪ್ರಾಯ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ, ವಿಕಲಚೇತನ ಅಧಿಕಾರಿ ಸಂಪತ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸವಿತಾ ರೈ, ಸಿಡಿಪಿಒ ಕಚೇರಿಯ ವ್ಯವಸ್ತಾಪಕಕಿ ಸವಿತಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ, ಬಾಲಕಿಯರ ಬಾಲಮಂದಿರದ ವಿದ್ಯಾಥಿಗಳು ಮತ್ತು ಸೆಂಟ್ ಮೈಕಲ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT