ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲೇ ಯುವಕನ ಸಾವು

ಬಜೆಗುಂಡಿ ಗ್ರಾಮ: ತಡವಾಗಿ ಬಂದ ಆಂಬುಲೆನ್ಸ್‌
Last Updated 5 ಮೇ 2021, 14:40 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ಬಜೆಗುಂಡಿ ಗ್ರಾಮದಲ್ಲಿ ಬುಧವಾರ ಆಂಬುಲೆನ್ಸ್‌ಗಾಗಿ ಕಾದ ಯುವಕನೊಬ್ಬ ರಸ್ತೆಮಧ್ಯೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಬಜೆಗುಂಡಿ ಗ್ರಾಮದ ಕಾರ್ಮಿಕರಾದ ಗೌರಿ ಅವರ ಪುತ್ರ ಮನು (23) ಮೃತಪಟ್ಟ ಯುವಕ.

ಕೆಲವು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ಮನು, ಮಂಗಳವಾರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿ ಕೊಟ್ಟು ಬಂದಿದ್ದ. ಬುಧವಾರ ಜ್ವರದಿಂದ ನಿತ್ರಾಣಗೊಂಡು ಮಧ್ಯಾಹ್ನ 12.30ಕ್ಕೆ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾನೆ. ಆಂಬುಲೆನ್ಸ್‌ ಬರುವ ಮುನ್ನವೇ ರಸ್ತೆ ಮೇಲೆ ಬಿದ್ದು ನರಳಿದ್ದಾನೆ, ಅಷ್ಟೊತ್ತಿಗೆ ಆಂಬುಲೆನ್ಸ್ ಬಂದಿದೆ, ಆರೋಗ್ಯ ಸಿಬ್ಬಂದಿ ಕರೆದೊಯ್ಯುವ ದಾರಿ ಮಧ್ಯೆ ಯುವಕ ಮೃತಪಟ್ಟಿದ್ದಾನೆ.

‘ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹವಿದ್ದು, ಶವಪರೀಕ್ಷೆಯ ನಂತರ ಸಾವಿಗೆ ನಿಖರ ಮಾಹಿತಿ ತಿಳಿಯುವುದು. ಕೋವಿಡ್‌ ಪರೀಕ್ಷೆ ವರದಿ ಬರುವವರೆಗೆ ಸೋಂಕು ತಗುಲಿತ್ತೇ ಇಲ್ಲವೇ ಎಂದು ಹೇಳಲಾಗುವುದಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT