ಸಿದ್ದಾಪುರ: ಕೊಣನೂರು-ಮಾಕೂಟ ರಾಜ್ಯ ಹೆದ್ದಾರಿಯ ಸಿದ್ದಾಪುರದಲ್ಲಿ ಸುಮಾರು 2 ಕಿ.ಮೀ ರಸ್ತೆ ಡಾಂಬರೀಕರಣ ತಿಂಗಳು ಕಳೆದರೂ, ಕಾಮಗಾರಿ ಮುಗಿದಿಲ್ಲ, ದೂಳಿನಿಂದ ಸ್ಥಳೀಯರು ಕಂಗಾಲಾಗಿದ್ದಾರೆ.

ಸಿದ್ದಾಪುರದ ಪಾಲಿಬೆಟ್ಟ ರಸ್ತೆಯಿಂದ ಇಂಜಲಗರೆಯವರೆಗಿನ 2 ಕಿ.ಮೀ ರಸ್ತೆಯ ವಿಸ್ತರಣೆ ಹಾಗೂ ಡಾಂಬರೀಕರಣಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದ್ದರು. ವಿರಾಜಪೇಟೆ ರಸ್ತೆಯಲ್ಲಿ ಮೂರು ಶಾಲೆ, ಒಂದು ಆಸ್ಪತ್ರೆ ಇದೆ. ಪ್ರತಿದಿನ ದೂಳಿನಿಂದಾಗಿ ಸಮಸ್ಯೆಯಾಗಿದ್ದು, ಕಾಮಗಾರಿಯನ್ನು ಇದೀಗ ನಿಲ್ಲಿಸಲಾಗಿದೆ.

ವಿದ್ಯುತ್ ಕಂಬ ತೆರವುಗೊಳಿಸಿಲ್ಲ: ಪಾಲಿಬೆಟ್ಟ ರಸ್ತೆಯಿಂದ ಅಯ್ಯಪ್ಪ ದೇವಸ್ಥಾನದವರೆಗೆ ಪಟ್ಟಣದ ಎರಡೂ ಬದಿ ಒಳಚರಂಡಿ ಮಾಡಲಾಗುತ್ತಿದ್ದು, ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಗುತ್ತಿಗೆದಾರರೇ ತೆರವು ಗೊಳಿಸಬೇಕಿತ್ತು ತೆರವುಗೊಳಿಸಿಲ್ಲ. ಕಂಬಗಳು ಇರುವ ಜಾಗವನ್ನು ಹೊರತುಪಡಿಸಿ, ಉಳಿದ ಭಾಗದಲ್ಲಿ ಚರಂಡಿ ನಿರ್ಮಿಸಲಾಗಿದೆ. ರಸ್ತೆಗಿಂತ 1 ಅಡಿ ಎತ್ತರದಲ್ಲಿ ಚರಂಡಿ ನಿರ್ಮಿಸಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಅಪಾಯಕ್ಕೆ ಎಡೆಮಾಡಿ ಕೊಡುವಂತಾಗಿದೆ.

ದಟ್ಟ ದೂಳು: ವಿರಾಜಪೇಟೆ ರಸ್ತೆ ಕಾಮಗಾರಿಯಿಂದ ರಸ್ತೆಯಲ್ಲಿ ದೂಳಿ ಆವರಿಸಿ, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಪ್ರಸ್ತುತ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ವಿದ್ಯಾರ್ಥಿ ಗಳು ಸೇರಿದಂತೆ ಸಾರ್ವಜನಿಕರು ಧೂಳಿನಿಂದ ಸಂಕಷ್ಟ ಎದುರಿಸುತ್ತಿ ದ್ದಾರೆ. ಪಟ್ಟಣದ ರಸ್ತೆ ಬದಿಯಲ್ಲೇ ನೂರಾರು ಮನೆಗಳಿದ್ದು, ಆಸ್ಪತ್ರೆಗಳಿಗೆ ಪ್ರತಿ ದಿನವೂ ರೋಗಿಗಳು ಸೇರಿದಂತೆ ಜನರು ದೂಳು ಮಿಶ್ರಿತ ಗಾಳಿ ಉಸಿರಾಡಬೇಕಿದೆ. ಸಂತ ಆನ್ಸ್ ಶಾಲೆ, ಸರ್ಕಾರಿ ಮಲಯಾಳಂ ಶಾಲೆ, ಶ್ರೀಕೃಷ್ಣ ವಿದ್ಯಾಮಂದಿರ ರಸ್ತೆ ಬದಿಯಲ್ಲೇ ಇವೆ. ರೋಗಗಳು ಹೆಚ್ಚುವ ಸಾಧ್ಯತೆ ಇದೆ ಎಂಬುದು ಸ್ಥಳೀಯ ನಿವಾಸಿಗಳ ಅಭಿಪ್ರಾಯವಾಗಿದೆ.

ಪ್ರತಿದಿನ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ತೆರಳುತ್ತಿದ್ದಾರೆ. ರಸ್ತೆ ಬದಿಯ ಆಸ್ಪತ್ರೆ, ಅಂಗಡಿಗಳು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಶೀಘ್ರ ಕಾಗಾರಿಯನ್ನು ಪೂರ್ಣಗೊಳಿಸಬೇಕು.
ಗಿರೀಶ್ ವಿ.ಕೆ, ಅಂಗಡಿ ಮಾಲಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.