ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ‘ರೋಬಸ್ಟಾ-2023’ ಕಾರು ರ‍್ಯಾಲಿಗೆ ಚಾಲನೆ

Published 17 ನವೆಂಬರ್ 2023, 14:46 IST
Last Updated 17 ನವೆಂಬರ್ 2023, 14:46 IST
ಅಕ್ಷರ ಗಾತ್ರ

ಸಿದ್ದಾಪುರ: ಬ್ಲೂ ಬ್ಯಾಂಡ್ ಎಫ್.ಎಂ.ಎಸ್‌.ಸಿ.ಐ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಷಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಹಕಾರದೊಂದಿಗೆ ‘ರೋಬಸ್ಟಾ 2023’ ರ್‍ಯಾಲಿಗೆ ಅಮ್ಮತಿಯ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಟಾಟಾ ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಪೆಮ್ಮಂಡ ಮಂದಣ್ಣ, ಬ್ರಿಗೇಡಿಯರ್ ಚೇಪ್ಪುಡಿರ ಪೊನ್ನಪ್ಪ, ಕರ್ನಲ್ ಕೆ.ಸಿ.ಸುಬ್ಬಯ್ಯ ರ‍್ಯಾಲಿ ಧ್ವಜ ಹಾರಿಸಿ ಚಾಲನೆ ನೀಡಿದರು.

ಕಾರು ರ‍್ಯಾಲಿಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಪುದುಚೇರಿ, ಗೋವಾ, ಚಂಡೀಗಢ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ 60ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ರ‍್ಯಾಲಿಯ ಸ್ಪರ್ಧೆಗಳು ಶನಿವಾರ ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.

ಬ್ಲೂ ಬ್ಯಾಂಡ್‌ನ ಪ್ರಮುಖರಾದ ಪ್ರೇಮನಾಥ್, ಮೂಸ, ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿಯ ಉದ್ಧಪಂಡ ತಿಮ್ಮಣ್ಣ, ಅಪ್ಪಣ್ಣ, ಸೋಮಣ್ಣ, ಮಹೇಶ್ ಅಪ್ಪಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT