ಮಂಗಳವಾರ, ಜನವರಿ 28, 2020
22 °C

ಕುಸಿದು ಬಿದ್ದಿದ್ದ ಕಾಡಾನೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ (ಕೊಡಗು): ಇಲ್ಲಿನ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಕಾಫಿ ತೋಟವೊಂದರಲ್ಲಿ ಗುರುವಾರ ಕುಸಿದುಬಿದ್ದಿದ್ದ ಹೆಣ್ಣು ಕಾಡಾನೆಯು, ಶನಿವಾರ ಮೃತಪಟ್ಟಿದೆ.

ತೀವ್ರ ಅಸ್ವಸ್ಥಗೊಂಡಿದ್ದ ಈ ಆನೆಗೆ, ಎರಡು ದಿನಗಳಿಂದ ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್‌ ಚಿಕಿತ್ಸೆ ನೀಡುತ್ತಿದ್ದರು. ನಿತ್ರಾಣಗೊಂಡಿದ್ದ ಅದನ್ನು, ದುಬಾರೆ ಶಿಬಿರದ ಸಾಕಾನೆಗಳ ನೆರವಿನಿಂದ ಎಬ್ಬಿಸಿ ನಿಲ್ಲಿಸುವ ಪ್ರಯತ್ನವನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತು.

ಮರಣೋತ್ತರ ಪರೀಕ್ಷೆ ಬಳಿಕ, ಕಾಡಾನೆಯ ಕಳೇಬರವನ್ನು ಹೂಳಲಾಯಿತು.  

ಪ್ರತಿಕ್ರಿಯಿಸಿ (+)