ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದ ಮಾವಿನ ಕಟ್ಟೆ ಬಳಿ ಭಾನುವಾರ ಎಂಟು ಕಾಡಾನೆಗಳ ಗುಂಪು ಬೈಕ್ನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದೆ.

ದಾಳಿಗೆ ಸಿಲುಕಿದ ದೊಡ್ಡಕೊಡ್ಲಿ ಗ್ರಾಮದ ಸತೀಶ್ ಹಾಗೂ ದೇವರಾಜ್ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆನೆಗಳು ಸೊಂಡಿಲಿನಿಂದ ತಳ್ಳುತ್ತಿದ್ದಂತೆ ಬೈಕ್ ಸಮೇತ ಇಬ್ಬರೂ ಗುಂಡಿಯೊಳಗೆ ಬಿದ್ದಿದ್ದಾರೆ. ನಂತರ ಅಲ್ಲಿಂದ ಆನೆಗಳು ಮುಂದೆ ಸಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ, ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಕಾಡಾನೆಗಳ ಗುಂಪು ಬಸವೇಶ್ವರ ದೇವಾಲಯದ ಬಳಿಯೇ ಬೀಡು ಬಿಟ್ಟಿವೆ. ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಕೊಟ್ರೇಶ್ ತಿಳಿಸಿದರು.

ಉಪ ವಲಯಾಧಿಕಾರಿ ಸತೀಶ್, ಅರಣ್ಯ ಸಿಬ್ಬಂದಿ ಪ್ರಕಾಶ್, ಶಿವರಾಜ್, ರಾಮಕೃಷ್ಣ, ಭರತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.