ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಕಲ್‌‌‌ನಲ್ಲಿ ಪರಿಸರ ಜಾಗೃತಿ

Published 1 ಜುಲೈ 2024, 7:29 IST
Last Updated 1 ಜುಲೈ 2024, 7:29 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸಮೀಪದ 7ನೇ ಹೊಸಕೋಟೆ ಯುವಕನೊಬ್ಬ 31 ಜಿಲ್ಲೆಗಳಲ್ಲಿ ಸೈಕಲ್ ಮೂಲಕ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲಿ ಗಿಡ ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾನೆ.

ಹವಾಮಾನ ವೈಪರೀತ್ಯ, ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಇಳಿಮುಖಗೊಂಡಿದ್ದು, ರಾಜ್ಯದ ಜನತೆ ಕುಡಿಯುವ ನೀರಿಗೆ ಹಾಹಾಕಾರ ಮಾಡುವುದನ್ನು ಮನಗಂಡ ಪೈಂಟರ್ ವೃತ್ತಿಯ ಪ್ರಶಾಂತ್ ಜಾಗೃತಿ ಮೂಡಿಸಿದವರು.

 ಸೈಕಲ್ ಮೂಲಕ ಸಂಚರಿಸಿ ಕರ್ನಾಟಕ ರಾಜ್ಯದ 31 ಜಿಲ್ಲೆಗಳಿಗೆ 26 ದಿನಗಳಲ್ಲಿ ಸಂಚರಿಸಿ ಪ್ರತೀ ಜಿಲ್ಲೆಯಲ್ಲಿ ಒಂದೊಂದು ಸಸಿ ನೆಟ್ಟಿದ್ದಾರೆ. ನೆಲ-ಜಲ ಸಂರಕ್ಷಣೆಯಂತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈತ 7ನೇ ಹೊಸಕೋಟೆ ಗ್ರಾಮದ ಸುರೇಶ ಹಾಗೂ ಉಷಾ ದಂಪತಿ
ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT