ರಾಷ್ಟ್ರಮಟ್ಟದ ಫ್ಲೋರ್‌ಬಾಲ್ ಟೂರ್ನಿ: ಸಿಂಚನಾಗೆ ಬೆಳ್ಳಿ ಪದಕ

7

ರಾಷ್ಟ್ರಮಟ್ಟದ ಫ್ಲೋರ್‌ಬಾಲ್ ಟೂರ್ನಿ: ಸಿಂಚನಾಗೆ ಬೆಳ್ಳಿ ಪದಕ

Published:
Updated:
Prajavani

ಶನಿವಾರಸಂತೆ: ಛತ್ತೀಸಗಡದಲ್ಲಿ ಇತ್ತೀಚೆಗೆ ನಡೆದ 64ನೇ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಫ್ಲೋರ್‌ಬಾಲ್‌ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ, ಪಟ್ಟಣದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್.ಎ.ಸಿಂಚನಾ ಬೆಳ್ಳಿ ಪದಕ ಗಳಿಸಿದ್ದಾರೆ.

ಸಿಂಜನಾ ಕರ್ನಾಟಕ ತಂಡದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇಲ್ಲಿನ ಭಾರತಿ ವಿದ್ಯಾಸಂಸ್ಥೆಯ ಪಿಯು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಜೆ.ಅಶೋಕ್, ಸುಶೀಲಾ ದಂಪತಿ ಪುತ್ರಿ ಸಿಂಚನಾ.

ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಥಾಮಸ್, ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಹಾಗೂ ಉಪನ್ಯಾಸಕರು ಸಿಂಚನಾ ಅವರನ್ನು ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !