ಮಂಗಳವಾರ, ನವೆಂಬರ್ 12, 2019
25 °C
ವಿರಾಜಪೇಟೆ ರೋಟರಿ ಪ್ರೌಢಶಾಲೆ

ಇಂಟರ‍್ಯಾಕ್ಟ್‌ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

Published:
Updated:

ಮಡಿಕೇರಿ: ವಿರಾಜಪೇಟೆ ರೋಟರಿ ಟ್ರಸ್ಟ್ ವತಿಯಿಂದ ಬಿಟ್ಟಂಗಾಲದಲ್ಲಿ ನಿವ೯ಹಿಸಲ್ಪಡುತ್ತಿರುವ ರೋಟರಿ ಪ್ರೌಢಶಾಲೆಯಲ್ಲಿ ರೋಟರಿ ಇಂಟರ‍್ಯಾಕ್ಟ್‌ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು.

ಇಂಟರ‍್ಯಾಕ್ಟ್‌ ಕ್ಲಬ್‌ನ ನೂತನ ಅಧ್ಯಕ್ಷರಾಗಿ ರೋಹನ್ ಚಂದ್ರಶೇಖರ್ ಮತ್ತು ಕಾಯ೯ದಶಿ೯ಯಾಗಿ ಹಿಮಾ ತಂಗಮ್ಮ ಪದಗ್ರಹಣ ಪಡೆದರು. ರೋಟರಿ ಜಿಲ್ಲೆ 3181ನ ಗವನ೯ರ್ ಜೋಸೆಫ್‌ ಮ್ಯಾಥ್ಯು ಪ್ರತಿಜ್ಞಾ ವಿಧಿ ಬೋಧಿಸಿದರು.

ರೋಟರಿ ವಲಯ 6ರ ಕಾಯ೯ದಶಿ೯ ಪಿ.ನಾಗೇಶ್, ಜೋನಲ್ ಲೆಫ್ಟಿನೆಂಟ್ ಡಾ.ಎಸ್.ವಿ.ನರಸಿಂಹನ್, ವಿರಾಜಪೇಟೆ ರೋಟರಿ ಅಧ್ಯಕ್ಷ ಆದಿತ್ಯ, ಕಾಯ೯ದಶಿ೯ ಭರತ್ ರಾಮ್ ರೈ, ರೋಟರಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುನೀಲ್ ನಾಣಯ್ಯ, ಇಶ್ರತ್ ಫಾತಿಮಾ, ರೋಟರಿ ಸದಸ್ಯರು ಪಾಲ್ಗೊಂಡಿದ್ದರು. 

 

ಪ್ರತಿಕ್ರಿಯಿಸಿ (+)