ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತ್ಯೇಕ ಘಟನೆ: ಎರಡು ಕಾಡಾನೆ ಸಾವು

Published 23 ಜೂನ್ 2024, 5:09 IST
Last Updated 23 ಜೂನ್ 2024, 5:09 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎರಡು ಕಾಡಾನೆಗಳು ಆಕಸ್ಮಿಕವಾಗಿ ಮೃತಪಟ್ಟಿವೆ.

ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಕಣ್ಣಂಗಾಲ ಗ್ರಾಮದ ಹಚ್ಚಿನಾಡು ಎಂಬಲ್ಲಿ ಕೆರೆಗೆ ಬಿದ್ದ 18 ವರ್ಷದ ಗಂಡಾನೆ ಕೆಸರಲ್ಲಿ ಸಿಲುಕಿ ಮೃತಪಟ್ಟಿದೆ. ಜೆಸಿಬಿ ಮೂಲಕ ಕಳೇಬರವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಗೋಣಿಕೊಪ್ಪಲುವಿನ ಅರ್ವತ್ತೊಕ್ಲು ಗ್ರಾಮದ ಸಮೀಪದ ಕಾಫಿ ತೋಟದಲ್ಲಿ 13 ವರ್ಷದ ಗಂಡಾನೆ ಕಬ್ಬಿಣದ ವಿದ್ಯುತ್ ಕಂಬ ಸ್ಪರ್ಶಿಸಿ, ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದೆ. ಕೆಲ ದಿನಗಳ ಹಿಂದೆಯಷ್ಟೇ ಸುಂಟಿಕೊಪ್ಪ ವ್ಯಾಪ್ತಿಯಲ್ಲೂ ಇದೇ ರೀತಿ ಕಬ್ಬಿಣದ ವಿದ್ಯುತ್ ಕಂಬ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟಿತ್ತು.

ಕೊಡಗಿನ ಕಣ್ಣಂಗಾಲ ಗ್ರಾಮದ ಹಚ್ಚಿನಾಡು ಬಳಿಯ ಕೆರೆಯಲ್ಲಿದ್ದ ಆನೆಯ ಕಳೇಬರವನ್ನು ಜೆಸಿಬಿ ಸಹಾಯದಿಂದ ಹೊರ ತೆಗೆಯಲಾಯಿತು
ಕೊಡಗಿನ ಕಣ್ಣಂಗಾಲ ಗ್ರಾಮದ ಹಚ್ಚಿನಾಡು ಬಳಿಯ ಕೆರೆಯಲ್ಲಿದ್ದ ಆನೆಯ ಕಳೇಬರವನ್ನು ಜೆಸಿಬಿ ಸಹಾಯದಿಂದ ಹೊರ ತೆಗೆಯಲಾಯಿತು
ಗೋಣಿಕೊಪ್ಪಲು ಸಮೀಪದ ಕಾಫಿ ತೋಟದಲ್ಲಿ ವಿದ್ಯುತ್ ಆಘಾತದಿಂದ ಮೃತಪಟ್ಟ ಕಾಡಾನೆ
ಗೋಣಿಕೊಪ್ಪಲು ಸಮೀಪದ ಕಾಫಿ ತೋಟದಲ್ಲಿ ವಿದ್ಯುತ್ ಆಘಾತದಿಂದ ಮೃತಪಟ್ಟ ಕಾಡಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT