ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

’ಉದ್ಯೋಗ ಮೇಳ ಸಹಕಾರಿ‘

Published 12 ಜೂನ್ 2024, 6:08 IST
Last Updated 12 ಜೂನ್ 2024, 6:08 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಮೇಳ ನಡೆಸುವುದರಿಂದ ಅಲ್ಲಿನ ಉದ್ಯೋಗಾಂಕ್ಷಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ’ ಎಂದು ಪುರಸಭೆ ಸದಸ್ಯ ಎಸ್.ಎಚ್. ಮತೀನ್ ಅಭಿಪ್ರಾಯಪಟ್ಟರು.

ಪಟ್ಟಣದ ಎ.ಟೆಕ್ ಎಜುಕೇಶನಲ್ ಸೆಂಟರ್ ಸೋಮವಾರ ಶಂಕರಾಚಾರ್ಯ ಟ್ರಸ್ಟ್ ಹಾಗೂ ಮೈಸೂರಿನ ನೈಸ್ ಸಂಸ್ಥೆ ಸಹಯೋಗದೊಂದಿಗೆ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

‘ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆದುಕೊಳ್ಳಲು ಉದ್ಯೋಗ ಮೇಳ ಸಹಕಾರಿಯಾಗಿದೆ’ ಎಂದರು.
ಪಟ್ಟಣ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಮಾತನಾಡಿ,‘ಸ್ಥಳೀಯರಿಗೆ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ ಪಡೆದುಕೊಳ್ಳಲು ಉದ್ಯೋಗ ಮೇಳಗಳು ನೆರವಾಗಲಿವೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಶಪೀರ್,‘ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯ ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಪ್ರತಿಷ್ಠಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಸ್ಥಳೀಯ ಯುವಕರು ಪಡೆದುಕೊಳ್ಳಬೇಕು’ ಎಂದರು.

ಸಂಸ್ಥೆಯ ಖಮರುದ್ದೀನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸುಮಾರು 150ಕ್ಕು ಹೆಚ್ಚು ಮಂದಿ ಮೇಳದಲ್ಲಿ ಭಾಗವಹಿಸಿದ್ದರು. ಆಶೀರ್ವಾದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಿದ್ದಿಖ್ ಹಂಸ, ಸಂಸ್ಥೆಯ ಮೇಲ್ವಿಚಾರಕರಾದ ಸೋನ, ಸಾಬೀರ ಉಪಸ್ಥಿತರಿದ್ದರು.

ವಿರಾಜಪೇಟೆಯ ಶಾನ್ಬೋಗ್ ಕಟ್ಟಡದಲ್ಲಿರುವ ಎ.ಟೆಕ್ ಎಜುಕೇಶನಲ್ ಸೆಂಟರ್ ವತಿಯಿಂದ ಶಂಕರಾಚಾರ್ಯ ಟ್ರಸ್ಟ್ ಹಾಗೂ ಮೈಸೂರಿನ ನೈಸ್ ಸಂಸ್ಥೆಯ ಸಹಯೋಗದೊಂದಿಗೆ ಸೋಮವಾರ ಉದ್ಯೋಗ ಮೇಳ ನಡೆಯಿತು.
ವಿರಾಜಪೇಟೆಯ ಶಾನ್ಬೋಗ್ ಕಟ್ಟಡದಲ್ಲಿರುವ ಎ.ಟೆಕ್ ಎಜುಕೇಶನಲ್ ಸೆಂಟರ್ ವತಿಯಿಂದ ಶಂಕರಾಚಾರ್ಯ ಟ್ರಸ್ಟ್ ಹಾಗೂ ಮೈಸೂರಿನ ನೈಸ್ ಸಂಸ್ಥೆಯ ಸಹಯೋಗದೊಂದಿಗೆ ಸೋಮವಾರ ಉದ್ಯೋಗ ಮೇಳ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT