ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಗುಡುಗು ಸಹಿತ ಬಿರುಸಿನ ಮಳೆ, ಸಿಡಿಲು ಬಡಿದು ಕಾರ್ಮಿಕ ಸಾವು

Published 3 ಮೇ 2024, 13:28 IST
Last Updated 3 ಮೇ 2024, 13:28 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶುಕ್ರವಾರ ಸಂಜೆ ಮಳೆ ಆರಂಭವಾಗಿದೆ.

ಕುಶಾಲನಗರ ಮತ್ತು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಗುಡುಗು, ಸಿಡಿಲುಗಳ ಅಬ್ಬರದಿಂದ ಕೆಲಹೊತ್ತು ಬಿರುಸಿನ ಮಳೆ ಸುರಿಯಿತು. ಮಡಿಕೇರಿಯಲ್ಲಿ ಗುಡುಗು, ಸಿಡಿಲುಗಳು ಅಬ್ಬರಿಸುತ್ತಿದ್ದು, ಗಾಳಿ ಜೋರಾಗಿ ಬೀಸುತ್ತಿದೆ.

ಗೋಣಿಕೊಪ್ಪಲು, ಪೊನ್ನಂಪೇಟೆ, ಬೇಗೂರು, ಬಿ.ಶೆಟ್ಟಿಗೆರಿ, ಕುಂದ ಭಾಗಕ್ಕೆ ಗುಡುಗು, ಬಿರುಗಾಳಿ ಸಹಿತ ವರ್ಷದ ಮೊದಲ ಮಳೆ ಸುರಿದಿದೆ. ವಿರಾಜಪೇಟೆಯಲ್ಲಿ ಇದೀಗ ತುಂತುರು ಮಳೆಯಾಗುತ್ತಿದೆ. ಸಿದ್ದಾಪುರ ಭಾಗದಲ್ಲೂ ಮಳೆ ಸುರಿದಿದೆ.

ಕೊಡಗಿನ ಸಿದ್ದಾಪುರದಲ್ಲಿ‌ ಮಳೆ

ಕೊಡಗಿನ ಸಿದ್ದಾಪುರದಲ್ಲಿ‌ ಮಳೆ

ಮಡಿಕೇರಿನಗರದಲ್ಲಿ‌ ಮಳೆ

ಮಡಿಕೇರಿನಗರದಲ್ಲಿ‌ ಮಳೆ

ಕೊಡಗು: ಸಿಡಿಲು ಬಡಿದು ಕಾರ್ಮಿಕ ಸಾವು

ಮಡಿಕೇರಿ: ತಾಲ್ಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಕಾರ್ಮಿಕ ಪ್ರಮಾತ್ ಗರ್ಮಾನಿ (37) ಮೃತಪಟ್ಟಿದ್ದಾರೆ.

ಒಡಿಸ್ಸಾ ರಾಜ್ಯದ ಇವರು ಬೆಟ್ಟಗೇರಿಯ ಮನೆಯೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಮಳೆ ಬರುವ ವೇಳೆ ಇವರು ಮನೆಯಿಂದ ಹೊರಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ತೀವ್ರವಾಗಿ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಕರೆ ತರುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರಮೇಶ್‌ಬಾಬು, ‘ಮೃತ ಕಾರ್ಮಿಕ ಪ್ರಮಾತ್ ಗರ್ಮಾನಿ ಅವರು ಒಡಿಸ್ಸಾ ರಾಜ್ಯದವರು ಎಂಬುದು ಗೊತ್ತಾಗಿದೆ. ಹೆಚ್ಚಿನ ವಿವರಗಳನ್ನು ಪತ್ತೆ ಪಡೆಯಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT