ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊದ್ದೂರಿನಲ್ಲಿ ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ- ಸಂಭ್ರಮ

ಗಮನ ಸೆಳೆದ ವಿವಿಧ ವಿನೋದಾವಳಿ ಮತ್ತು ಸ್ಪರ್ಧೆಗಳ
Published 12 ಜೂನ್ 2024, 6:07 IST
Last Updated 12 ಜೂನ್ 2024, 6:07 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ನ ಕಾರ್ಯಕಾರಿ ಸಮಿತಿ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತವರ ಕುಟುಂಬದವರಿಗಾಗಿ ಆಯೋಜಿಸಿದ್ದ ಸಂತೋಷಕೂಟದಲ್ಲಿ ಮಹಿಳೆಯರು, ಪುರುಷರು, ಮಕ್ಕಳು ವಿವಿಧ ವಿನೋದಾವಳಿ ಮತ್ತು ಸ್ಪರ್ಧೆಗಳ ಮೂಲಕ ಸಂಭ್ರಮಿಸಿದರು.

ಹೊದ್ದೂರು ಮುಕ್ಕೋಲೆ ಎಸ್ಟೇಟ್ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಅಬ್ಲ್ ಕೊಯೆ (ಅವಲಕ್ಕಿಯಿಂದ ಮಾಡಲಾಗುವ ವಿಶೇಷ ಖಾದ್ಯ) ತಯಾರಿಕೆ ಮೂಲಕ ಆರಂಭಿಸಲಾಯಿತು. ಬಳಿಕ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ ಉದ್ಘಾಟಿಸಿದರು.

ಪುಟ್ಟ ಮಕ್ಕಳಿಗೆ ನಡೆದ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಶಾಲಿನ್ ಸರ್ಫುದ್ದೀನ್ ಪ್ರಥಮ, ಆಶ್ಮ್ ಮೊಹಮ್ಮದ್ ದ್ವಿತೀಯ ಮತ್ತು ರಿಫಾನ್ ರಫೀಕ್ ತೃತೀಯ ಬಹುಮಾನ ಪಡೆದರು.

ಬಕೇಟ್‌ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಶಾಲಿನ್ ಸರ್ಫುದ್ದೀನ್ ಪ್ರಥಮ, ಆಶ್ಮ್ ಮೊಹಮ್ಮದ್ ದ್ವಿತೀಯ, ರಿಫಾನ್ ರಫೀಕ್ ತೃತೀಯ ಮತ್ತು ಮಿನ್ಹಾ ಮರಿಯಂ 4ನೇ ಸ್ಥಾನ, ಬಾಲಕರ ವಿಭಾಗದ ಬಕೇಟಿಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಕುಂಡಂಡ ರಝೀನ್ ರಜಾಕ್ ಪ್ರಥಮ, ಮಂಡೆಂಡ ಮುಜಮಿಲ್ ಮೊಯ್ದು ದ್ವಿತೀಯ ಮತ್ತು ಕುಂಡಂಡ ಸುಹೈಬ್ ರಜಾಕ್ ತೃತೀಯ ಬಹುಮಾನ ಪಡೆದರು.

ಬಾಲಕರ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಆಲೀರ ರಮೀಜ್ ರಶೀದ್ ಪ್ರಥಮ, ಪುಡಿಯಂಡ ಆಶೀರ್ ಹನೀಫ್ ದ್ವಿತೀಯ ಮತ್ತು ಮಂಡೆಂಡ ಮುಜ್ತಬಾ ಮೊಯ್ದು ತೃತೀಯ, ಪುರುಷರ ವಿಭಾಗದಲ್ಲಿ ಮಂಡೆಂಡ ಮುಶ್ರಫ್ ಮೊಯ್ದು ಪ್ರಥಮ, ಕರ್ತೋರೆರ ಶರ್ಫುದ್ದೀನ್ ದ್ವಿತೀಯ ಮತ್ತು ಕರ್ತೋರೆರ ಮುಸ್ತಫ ತೃತೀಯ, ಮಹಿಳೆಯರ ವಿಭಾಗದಲ್ಲಿ ಕರ್ತೋರೆರ ರಝಿಯಾ ಮುಸ್ತಫ ಪ್ರಥಮ, ಪುಡಿಯಂಡ ಫಾಹಿಲಾ ಸಾದುಲಿ ದ್ವಿತೀಯ ಮತ್ತು ಮಿತಲತಂಡ ಅಜ್ಮಿಯ ಇಸ್ಮಾಯಿಲ್ ತೃತೀಯ ಸ್ಥಾನ ಪಡೆದುಕೊಂಡರು.

ಸಂಸ್ಥೆಯ ಕೋಶಾಧಿಕಾರಿಯಾದ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಶ್ಚಂದ್ರ ಎ.ಹಂಸ ಮಾತನಾಡಿ, ‘ಎಲ್ಲರೂ ಒಟ್ಟಿಗೆ ಸೇರುವುದರಿಂದ ಉತ್ತಮ ಬಾಂಧ್ಯವ್ಯ ಬೆಳೆಯಲಿದೆ’ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಈತಲತಂಡ ರಫೀಕ್ ತೂಚಮಕೇರಿ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಅಕ್ಕಳತಂಡ ಎಸ್.ಮೊಯ್ದು, ಜಂಟಿ ಕಾರ್ಯದರ್ಶಿ ಕರ್ತೋರೆರ ಮುಸ್ತಫ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಹಿರಿಯ ಪದಾಧಿಕಾರಿಗಳಾದ ಕುಪ್ಪಂದಿರ ಯೂಸೂಫ್ ಹಾಜಿ, ಆಲೀರ ಬಿ.ಅಬ್ದುಲ್ಲಾ, ಪುಡಿಯಂಡ ಸಾದುಲಿ, ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ, ಪೊಯಕೆರ ಎಸ್.ಮೊಹಮ್ಮದ್ ರಫೀಕ್, ಮಂಡೇಂಡ ಎ.ಮೊಯ್ದು, ಸಂಘಟನಾ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಭಾಗವಹಿಸಿದ್ದರು.

Highlights - ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ನಲಿದ ಪುಟ್ಟ ಮಕ್ಕಳು ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ ಹಲವು ಸದಸ್ಯರು ಸಮಾರಂಭದಲ್ಲಿ ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT