ನಾನು ಆಕಾಂಕ್ಷಿ ಎನ್ನುವುದು ಸುಶಿಕ್ಷಿತರಿಗೆ ಅರ್ಥವಾಗಿದೆ
‘ನಾನು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎನ್ನುವುದು ಆ ಕ್ಷೇತ್ರದ ವಿದ್ಯಾವಂತರಿಗೆ ಅರಿವಾಗಿದೆ’ ಎಂದು ಬಿಜೆಪಿ ಮುಖಂಡ ಪ್ರತಾಪಸಿಂಹ ತಿಳಿಸಿದರು. ನಾಗೇಂದ್ರ ಅವರು ಚಾಮರಾಜ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಾಪಸಿಂಹ ‘ನಾನೊಬ್ಬ ಆಕಾಂಕ್ಷಿಯೇ ಹೊರತು ಇನ್ನೂ ಅಭ್ಯರ್ಥಿಯಾಗಿಲ್ಲ ಎಂಬುದು ವಿದ್ಯಾವಂತರಿಗೆಲ್ಲ ಅರ್ಥವಾಗುತ್ತದೆ’ ಎಂದು ಹೇಳಿದರು. ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸುಶಿಕ್ಷತರು ಹೆಚ್ಚಿದ್ದಾರೆ. ಹಾಗಾಗಿ ಅಲ್ಲಿ ಸ್ಪರ್ಧಿಸಲು ನಾನು ಉತ್ಸುಕನಾಗಿದ್ದೇನೆ. ಬಿಜೆಪಿಯ ಯಾರಿಗೆಲ್ಲ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕೊಟ್ಟಿಲ್ಲವೋ ಅವರನ್ನೆಲ್ಲ ರಾಜ್ಯ ಕಾರಣದಲ್ಲಿ ತೊಡಗಿಸಿಕೊಂಡಿದೆ. ನಾನೂ ಸಹ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿರುವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ದೃಷ್ಟಿಯಿಂದಲೇ ದೇವರಾಜ ಅರಸು ಅವರಿಗೆ ಸರಿಸಮ ಆಗಲಾರರು. ಈ ಕುರಿತು ಚರ್ಚೆಯೇ ಅನಗತ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರುram