ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

7

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

Published:
Updated:

ನಾಪೋಕ್ಲು: ಸಮೀಪದ ಬಾವಲಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ವಿಷ ಸೇವಿಸಿ, ನಂತರ ಕೋವಿಯಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾವಲಿ ಗ್ರಾಮದ ಪೊನ್ನಚ್ಚನ ಸೋಮಯ್ಯ (66) ಆತ್ಮಹತ್ಯೆ ಮಾಡಿಕೊಂಡವರು.

ಸೋಮಯ್ಯ ಅವರು ಪತ್ನಿ ರುಕ್ಮಿಣಿ ಮತ್ತು ಮಗ ತಿಲಕ್ ಹಾಗೂ ಸೊಸೆಯೊಂದಿಗೆ ಬೇರೆಯಾಗಿ ಮೂರ್ನಾಡಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಎರಡು ವರ್ಷಗಳ ಹಿಂದೆ ಸೋಮಯ್ಯ ಬಾವಲಿಯ ಮನೆಗೆ ಕೋವಿ ತೆಗೆದುಕೊಂಡು ಹೋಗಿ ಪತ್ನಿ ರುಕ್ಮಿಣಿಗೆ ಕಿಟಕಿಯಿಂದ  ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಒಂದೂವರೆ ವರ್ಷ ಜೈಲಿನಲ್ಲಿದ್ದರು.

ಮನೆಯ ದುರಂತದಿಂದ ನೊಂದ ಮಗ ತಿಲಕ್ ಸಹ ಕೆರೆಗೆ ಬಿದ್ದು ಸಾವನ್ನಪ್ಪಿದ್ದರು. ಜೈಲಿನಿಂದ ಬಂದ ಸೋಮಯ್ಯ ಬಾವಲಿಯ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್‍ಐ ನಂಜುಂಡ ಸ್ವಾಮಿ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದೆ. 

 

 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !