ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಚಾಲಕರು, ಮೋಟಾರು ಕೆಲಸಗಾರರ ಸಂಘದ ವಾರ್ಷಿಕ ಸಭೆ

Published 29 ಮೇ 2023, 10:52 IST
Last Updated 29 ಮೇ 2023, 10:52 IST
ಅಕ್ಷರ ಗಾತ್ರ

ಸೋಮವಾರಪೇಟೆ: ಇಲ್ಲಿನ ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘದ ವಾರ್ಷಿಕ ಸಭೆ ಮಾನಸ ಸಭಾಂಗಣದಲ್ಲಿ ಭಾನುವಾರ ಸಂಘದ ಅಧ್ಯಕ್ಷ ಕೆ.ಜಿ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘಧ ಅಧ್ಯಕ್ಷ ಸುರೇಶ್ ಮಾತನಾಡಿ, ‘ನಮ್ಮ ಬಹುದಿನಗಳ ಬೇಡಿಕೆಯಾದ ಸ್ವಂತ ಕಟ್ಟಡ ಹೊಂದುವುದು, ಅದನ್ನು ನಿಮ್ಮೆಲ್ಲರ ಸಹಕಾರದಿಂದ, ಈಗ ಪಟ್ಟಣ ಪಂಚಾಯಿತಿಯ ಎದುರು ಸಂಘಕ್ಕೆ ₹ 26 ಲಕ್ಷದಲ್ಲಿ ಸ್ವಂತ ನಿವೇಶನ ಖರೀದಿಸಿ, ಅದರಲ್ಲಿ ವೆಚ್ಚದ ನಿವೇಶನದಲ್ಲಿ ದಾನಿಗಳ ನೆರವಿನೊಂದಿಗೆ ₹ 23 ಲಕ್ಷ ವೆಚ್ಚದ ಕಟ್ಟಡ ನಿರ್ಮಾಣ ಮಾಡಿ ಇತ್ತೀಚೆಗೆ ಉದ್ಘಾಟನೆ ಮಾಡಲಾಗಿದೆ. ಸಂಘದಲ್ಲಿ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡುತ್ತಿದ್ದು, ಹೆಚ್ಚಿನ ಅಭಿವೃದ್ಧಿಗೆ ಎಲ್ಲ ಸದಸ್ಯರು ಹೆಚ್ಚಿನ ಸಹಕಾರ ನೀಡಿದಲ್ಲಿ ಸಾಧನೆಗೈಯಲು ಸಾಧ್ಯ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಗ್ರೂಪ್ ವಿಮೆ ಮಾಡಿಸುವಂತೆ ಸದಸ್ಯರು ಸಲಹೆ ನೀಡಿದ ಮೇರೆಗೆ, ಮುಂದಿನ ದಿನಗಳಲ್ಲಿ ವಿಮೆ ಮಾಡಿಸುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು. ಸಂಘದ ಆಡಳಿತ ಮಂಡಳಿಯನ್ನು ಮುಂದಿನ ಸಾಲಿನವರೆಗೆ ಮುಂದುವರಿಸಲು ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ವಿನ್ಸಿ ಡಿಸೋಜಾ, ಖಜಾಂಚಿ ಮಣಿ, ಪ್ರಮುಖರಾದ ಡ್ಯಾನಿಯಲ್, ಕೃಷ್ಣ, ರಮೇಶ್, ಶೇಷಪ್ಪ ಮತ್ತು ಎ.ಪಿ. ವೀರರಾಜು ಇದ್ದರು.

ಸೋಮವಾರಪೇಟೆ ಮಾನಸ ಸಭಾಂಗಣದಲ್ಲಿ ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದ ಸಂಘದ ಸದಸ್ಯರು.  
ಸೋಮವಾರಪೇಟೆ ಮಾನಸ ಸಭಾಂಗಣದಲ್ಲಿ ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದ ಸಂಘದ ಸದಸ್ಯರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT