ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆ ಪ್ರವೇಶ: ಅಧಿಕಾರಿಗಳಿಗೆ 3 ತಿಂಗಳು ರಜೆ ರದ್ದು

ಕೇಂದ್ರ ಸ್ಥಾನದಲ್ಲೇ ಇದ್ದು ಕರ್ತವ್ಯ ನಿರ್ವಹಿಸಬೇಕು: ಜಿಲ್ಲಾಧಿಕಾರಿ ಖಡಕ್‌ ಸೂಚನೆ
Last Updated 7 ಮೇ 2019, 13:12 IST
ಅಕ್ಷರ ಗಾತ್ರ

ಮಡಿಕೇರಿ: ಇನ್ನೇನು ಕೊಡಗಿಗೆ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆಯಿದ್ದು ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಜೂನ್ 1ರಿಂದ ಆಗಸ್ಟ್ 31ರ ತನಕ ರಜೆ ಪಡೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋಡಲ್ ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಸಮಿತಿ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅನಾಹುತವಾದರೆ ತಕ್ಷಣ ಸ್ಪಂದಿಸಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಕೇಂದ್ರ ಸ್ಥಾನದಿಂದ ಅನುಮತಿ ಪಡೆದು ಹೊರಡಬೇಕು ಎಂದು ಸೂಚಿಸಿದರು.

ಸೂಕ್ಷ್ಮ ಪ್ರದೇಶವಾಗಿರುವ 32 ಗ್ರಾ.ಪಂ ವ್ಯಾಪ್ತಿಗೆ ನಿಯೋಜಿಸಿರುವ ನೋಡೆಲ್ ಅಧಿಕಾರಿಗಳು ತಮ್ಮ ಗ್ರಾ.ಪಂ ವ್ಯಾಪ್ತಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅಧ್ಯಯನ ಮಾಡಿ ಒಂದು ವಾರದೊಳಗೆ ವರದಿ ನೀಡಬೇಕು ಎಂದು ಡಿಸಿ ಸೂಚಿಸಿದರು.

ಉಪ ಸಮಿತಿ ತಮ್ಮ ಹಂತದಲ್ಲಿ ಸಭೆ ನಡೆಸಿ ಸಭಾ ನಡವಳಿಯ ವರದಿ ಸಲ್ಲಿಸಿ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್, ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಮಹಂತೇಶಪ್ಪ, ಭೂದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಯುನೆಸೆಫ್ ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿ ಪ್ರಭಾತ್, ಅಗ್ನಿ ಶಾಮಕ ಇಲಾಖೆ ಅಧಿಕಾರಿ ಚೇತನ್ ಹಾಜರಿದ್ದರು.

ವಿವಿಧ ಸಮಿತಿಗಳು– ಸಂಪರ್ಕ ಮೊಬೈಲ್‌: ಮುನ್ನೆಚ್ಚರಿಕೆ ಹಾಗೂ ಸಂತ್ರಸ್ತರನ್ನು ಸ್ಥಳಾಂತರಿಸುವ ಸಮಿತಿ – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಅಧ್ಯಕ್ಷರು) – 94808 04901, ಹೆಚ್ಚುವರಿ ಜಿಲ್ಲಾಧಿಕಾರಿ (ಸದಸ್ಯ ಕಾರ್ಯದರ್ಶಿ) – 82778 63436, ಸದಸ್ಯರಾಗಿ ಉಪ ವಿಭಾಗಾಧಿಕಾರಿ – 97399 79309, ಜಿಲ್ಲಾ ಅಗ್ನಿಶಾಮಕ ಅಧಿಕಾರಿ – 94828 07203.

ಶೋಧನಾ ಮತ್ತು ರಕ್ಷಣಾ ಸಮಿತಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಅಧ್ಯಕ್ಷರು), ಸದಸ್ಯ ಕಾರ್ಯದರ್ಶಿಯಾಗಿ ಉಪ ವಿಭಾಗಾಧಿಕಾರಿ, ಸದಸ್ಯರಾಗಿ ಜಿ.ಪಂ ಉಪ ಕಾರ್ಯದರ್ಶಿ– 94808 69001, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ – 98451 52053.

ಪರಿಹಾರ ನಿರ್ವಹಣಾ ಸಮಿತಿ: ಜಿ.ಪಂ ಸಿಇಒ 94808 69000, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (ಸದಸ್ಯ ಕಾರ್ಯದರ್ಶಿ) 98804 02453.

ಆಹಾರ ಮತ್ತು ಸ್ವಚ್ಛತಾ ಸಮಿತಿ: ಜಿ.ಪಂ ಸಿಇಒ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ (ಸದಸ್ಯ ಕಾರ್ಯದರ್ಶಿ) – 98804 02453, ಸದಸ್ಯರಾಗಿ ತಾ.ಪಂ ಇಒಗಳು ಮಡಿಕೇರಿ– 94808 69100, ಪೊನ್ನಂಪೇಟೆ– 94808 69110, ಸೋಮವಾರಪೇಟೆ 94808 69105.

ಆಶ್ರಯ ನಿರ್ವಹಣಾ ಸಮಿತಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಅಧ್ಯಕ್ಷರು), ಸದಸ್ಯ ಕಾರ್ಯದರ್ಶಿಯಾಗಿ ಉಪ ವಿಭಾಗಾಧಿಕಾರಿ– 97399 79309, ಸದಸ್ಯರಾಗಿ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ – 94827 29570, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ – 96119 21927.

ಆರೋಗ್ಯ ಸಮಿತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ – 94498 43058.

ಜಾನುವಾರು ರಕ್ಷಣಾ ಸಮಿತಿ: ವಿರಾಜಪೇಟೆ ಡಿಸಿಎಫ್ (ಅಧ್ಯಕ್ಷರು) – 94565 48611, ಪಶುಪಾಲನಾ ಇಲಾಖೆ ಉಪ ನಿರ್ದೇಶಕರು (ಸದಸ್ಯ ಕಾರ್ಯದರ್ಶಿ) – 94487 20650, ಸದಸ್ಯರಾಗಿ ವನ್ಯಜೀವಿ ವಿಭಾಗದ ಡಿಸಿಎಫ್ – 94480 43636, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ – 70229 48991.

ಪುನರ್ ನಿರ್ಮಾಣ ಸಮಿತಿ: ಉಪ ವಿಭಾಗಾಧಿಕಾರಿ (ಅಧ್ಯಕ್ಷರು) 97399 79309, ಉಪ ನಿರ್ದೇಶಕರು, ಕೃಷಿ ಇಲಾಖೆ (ಸದಸ್ಯ ಕಾರ್ಯದರ್ಶಿ)– 82779 61901, ಸದಸ್ಯರಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು – 82779 31900, ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ – 82779 31901.

ಟಾಸ್ಕ್‌ಪೋರ್ಸ್ ಸಮಿತಿ: ಅತೀ ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ಡಿಸಿಎಫ್ ಮಡಿಕೇರಿ ಮತ್ತು ವಿರಾಜಪೇಟೆ 94481 36646, ಸೆಸ್ಕ್ ಇಇ– 9449 598601, ಲೋಕೋಪಯೋಗಿ ಇಲಾಖೆ ಇಇ 9448 428821.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT