ಕಾಲು ಜಾರಿ ಕೆರೆಗೆ ಬಿದ್ದು ಕಾರ್ಮಿಕ ಸಾವು

ಬುಧವಾರ, ಏಪ್ರಿಲ್ 24, 2019
28 °C

ಕಾಲು ಜಾರಿ ಕೆರೆಗೆ ಬಿದ್ದು ಕಾರ್ಮಿಕ ಸಾವು

Published:
Updated:

ಸುಂಟಿಕೊಪ್ಪ: ಸಮೀಪದ ಕೆದಕಲ್ ಬಳಿಯ ಮೋದೂರಿನಲ್ಲಿ ಗುರುವಾರ ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾರ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಮೋದೂರು ಮಂಜುನಾಥ ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಕಾರ್ಮಿಕ ಮುತ್ತಣ್ಣ (40) ಮೃತಪಟ್ಟವರು.

ಮುತ್ತಣ್ಣ ಅವರು ತೋಟದ ಕೆರೆಗೆ ಬಟ್ಟೆ ಒಗೆಯಲೆಂದು ಹೋಗಿದ್ದ ಅವರು ಸಂಜೆಯಾದರೂ ಮನೆಗೆ ಬಾರದ ಕಾರಣ ಕುಟುಂಬದವರು ಹುಡುಕಿದ್ದಾರೆ. ಶುಕ್ರವಾರ ಕೆರೆಬದಿಯಲ್ಲಿ ಬಟ್ಟೆಗಳನ್ನು ನೋಡಿ ಕೆರೆಯಲ್ಲಿ ಬಿದ್ದಿರಬಹುದು ಎಂದು ಶಂಕಿಸಿದ್ದಾರೆ.

ಮಾಹಿತಿಯಂತೆ ಅಲ್ಲಿಗೆ ಬಂದ ಮಡಿಕೇರಿ ಅಗ್ನಿಶಾಮಕ ದಳದ ಲೀಡಿಂಗ್ ಫೈರ್ ಮ್ಯಾನ್ ಸತೀಶ್, ಸಿಬ್ಬಂದಿ ಎಂ.ಎಂ.ನಂಜಪ್ಪ, ಎನ್.ಸಿ.ಭರತ್ ಚಾಲಕ ಪ್ರಕಾಶ್  ಕೆರೆಗೆ  ’ಪಾತಾಳ ಗಾಳ’ ಹಾಕಿ ಮೃತದೇಹವನ್ನು ಹೊರ ತೆಗೆದಿದರು.

ಮುತ್ತಣ್ಣ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !