ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಪರಿಹಾರ ದುರುಪಯೋಗ ಆರೋಪ

ಸಾಮಾನ್ಯ ಸಭೆಯಲ್ಲಿ ನಗರಸಭೆ ಸಿಬ್ಬಂದಿಗಳ ವಿರುದ್ಧವೇ ಆಕ್ರೋಶ
Last Updated 10 ಜನವರಿ 2019, 15:13 IST
ಅಕ್ಷರ ಗಾತ್ರ

ಮಡಿಕೇರಿ: ಮಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾದ ಕೆಲವು ಕುಟುಂಬಕ್ಕೆ ಇನ್ನೂ ಪರಿಹಾರ ಹಣ ಸಿಕ್ಕಿಲ್ಲ; ಪರಿಹಾರ ಚೆಕ್‌ಗಾಗಿ ಕೆಲವು ಸಿಬ್ಬಂದಿ ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪವು ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯರೆಲ್ಲರೂ ಒಮ್ಮತದಿಂದಪರಿಹಾರ ಚೆಕ್‌ ವಿತರಣೆಯಲ್ಲಿ ಅಧಿಕಾರಿಗಳು ಹಣ ದುರುಪಯೋಗ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಆಗಬೇಕೆಂದು ಪಟ್ಟು ಹಿಡಿದರು.

ಸದಸ್ಯ ಪಿ.ಡಿ. ಪೊನ್ನಪ್ಪ, ಚೆಕ್‌ ನೀಡಲು ಕೆಲವು ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಸಭೆಗೆ ಕರೆಸಬೇಕು ಎಂದು ಆಗ್ರಹಿಸಿದರು.

ಪೌರಾಯುಕ್ತ ರಮೇಶ್, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರೂ ಆಕ್ರೋಶ ತಣ್ಣಗೆ ಆಗಲಿಲ್ಲ.

ಪರಿಹಾರ ಸಿಗದೇ ಕಚೇರಿಗಳನ್ನು ಅಲೆದಾಡುವ ಪರಿಸ್ಥಿತಿಯಿದೆ. ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಬಿಜೆಪಿ ಕೆ.ಎಸ್‌. ರಮೇಶ್‌ ಕೋರಿದರು.

‘ಮಳೆಹಾನಿ ಚೆಕ್‌ ವಿಚಾರದಲ್ಲಿ ನಗರಸಭೆ ಸಿಬ್ಬಂದಿಗಳನ್ನು ವಿಚಾರಣೆ ಮಾಡಬೇಕು’ ಎಂದು ಕಾಂಗ್ರೆಸ್‌ ಸದಸ್ಯ ಎಚ್‌.ಎಂ. ನಂದಕುಮಾರ್ ಸಭೆ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ವ್ಯವಸ್ಥಾಪಕ ತಾಹೀರ್‌, ‘ಅಧಿಕಾರಿಗಳು ತಪ್ಪು ಎಸಗಿದ್ದರೆ ಶಿಕ್ಷೆಯಾಗಬೇಕು. ಅಂತಹ ಅಧಿಕಾರಿಗಳನ್ನು ಪತ್ತೆ ಹಚ್ಚಲಾಗುವುದು’ ಎಂದು ಭರವಸೆ ನೀಡಿದರು.

ಕಸ ಸಂಗ್ರಹ ವಾಹನಗಳು ಬರುತ್ತಿಲ್ಲ: ಸಾಕಷ್ಟು ವಾರ್ಡ್‌ಗಳಲ್ಲಿ ಸ್ವಚ್ಛತೆ ಸಮಸ್ಯೆಯಿದ್ದು ಕಸ ಸಂಗ್ರಹಿಸಲು ವಾಹನಗಳು ಸಮಯಕ್ಕೆ ಸರಿ ಬರುತ್ತಿಲ್ಲ ಎಂದು ಸದಸ್ಯ ರಮೇಶ್‌ ದೂರಿದರು.

ಉಪಾಧ್ಯಕ್ಷ ಟಿ.ಎಸ್‌. ಪ್ರಕಾಶ್‌ ಮಾತನಾಡಿ, ನಗರದ 23 ವಾರ್ಡ್‌ಗಳಿಂದ ರಾಶಿರಾಶಿ ಕಸವನ್ನು ಸಂಗ್ರಹಿಸಿ ತಂದು ಸ್ಟೋನ್‌ ಹಿಲ್‌ನಲ್ಲಿ ಸುರಿಯಲಾಗುತ್ತಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎಂದು ದೂರಿದರು.

ಸದಸ್ಯ ಕೆ.ಜಿ. ಪೀಟರ್‌ ಮಾತನಾಡಿ, ನೂತನ ಮಾರುಕಟ್ಟೆ ಕಾಮಗಾರಿಕಳಪೆಯಾಗಿದೆ ಎಂದು ದೂರಿದರು.

ನೀರಿನ ಸಮಸ್ಯೆಗಳಿರುವ ವಾರ್ಡ್‌ಗಳನ್ನು ಪಟ್ಟಿ ಮಾಡಿ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದುಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT