26ರಂದು ಮಾನವ ಸರಪಳಿ, ಸೌಹಾರ್ದ ಸಮ್ಮೇಳನ

7

26ರಂದು ಮಾನವ ಸರಪಳಿ, ಸೌಹಾರ್ದ ಸಮ್ಮೇಳನ

Published:
Updated:

ಮಡಿಕೇರಿ: ಗಣರಾಜ್ಯೋತ್ಸವ ಅಂಗವಾಗಿ ಎಸ್‌ಕೆಎಸ್ಎಸ್ಎಫ್ (ಸಮಸ್ತ ಕರ್ನಾಟಕ ಸುನ್ನಿ ಸ್ಟೂಡೆಂಟ್ ಫೆಡರೇಷನ್) ವತಿಯಿಂದ ಜ.26ರಂದು ಕುಶಾಲನಗರದ ದಂಡಿನಪೇಟೆಯ ಕಾರು ನಿಲ್ದಾಣದ ಬಳಿ ಮಾನವ ಸರಪಳಿ, ಸೌಹಾರ್ದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿಸ್ಲಾಹಿ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 12 ವರ್ಷಗಳಿಂದ ಗಣರಾಜ್ಯೋತ್ಸವ ಅಂಗವಾಗಿ ‘ರಾಷ್ಟ್ರ ರಕ್ಷಣೆಯ ಸೌಹಾರ್ದ ಸಂಕಲ್ಪ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಂದು ಬೆಳಿಗ್ಗೆ ಕುಶಾಲನಗರದ ದಾರೂಲ್ ಉಲೂಂ ಮದ್ರಾಸ ಸಮೀಪದಿಂದ ಮೆರವಣಿಗೆ ಹೊರಟು ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ದಂಡಿನಪೇಟೆ ಮಾರ್ಗವಾಗಿ ಕಾರು ನಿಲ್ದಾಣದಲ್ಲಿ ಒಟ್ಟು ಸೇರಿ ಮಾನವ ಸರಪಳಿ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ತಂಲೀಖ್ ದಾರಿಮಿ, ಕಾರ್ಯದರ್ಶಿ ಆರಿಫ್‌ ಫೈಝಿ, ನಿರ್ದೆಶಕರಾದ ಉಮ್ಮರ್ ಫೈಝಿ, ಅಬ್ದುಲ್ ಮಜೀದ್‌, ಉಸ್ಮಾನ್‌ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !