ಮಲ್ಲಿಕಾರ್ಜುನ ಕಾಲೊನಿಯಲ್ಲಿ ಬೈರಿ ಅವರು ಮೊದಲು ವಾಸವಾಗಿದ್ದ ಪ್ಲಾಸ್ಟಿಕ್ ಹೊದಿಸಿದ ‘ಮನೆ’
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಸಂಕಷ್ಟ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ವೃದ್ಧೆ ಬೈರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸುಂಟಿಕೊಪ್ಪದ ಸಮಾಜಸೇವಕ ಪಿ.ಎಂ .ಲತೀಫ್ ಅವರು ಕಟ್ಟಿಸಿಕೊಟ್ಟ ಮನೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಯ ಮಲ್ಲಿಕಾರ್ಜುನ ಕಾಲೊನಿಯಲ್ಲಿ ವೃದ್ಧೆ ಬೈರಿಗೆ ಸಮಾಜಸೇವಕ ಪಿ.ಎಂ. ಲತೀಫ್ ಅವರು ಕಟ್ಟಿಸಿಕೊಟ್ಟ ಮನೆಯನ್ನು ಶಾಸಕ ಡಾ. ಮಂತರ್ ಗೌಡ ಶುಕ್ರವಾರ ಹಸ್ತಾಂತರಿಸಿದರು.

ತಾಯಿ ಮತ್ತು ಮಗನ ಪರಿಸ್ಥಿತಿ ಗಮನಿಸಿ ಮರುಕ ಉಂಟಾಯಿತು. ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದೆ. ಅವರಿಗೆ ಕೊಟ್ಟ ಮಾತಿನಂತೆ ನನ್ನಿಂದಾಗುವಂತೆ ನಿರ್ಮಿಸಿ ಮನೆ ನೀಡಿದೆ ಸಂತೃಪ್ತಿ ಇದೆ.
ಪಿ.ಎಂ. ಲತೀಫ್ ಸಮಾಜ ಸೇವಕ ಸುಂಟಿಕೊಪ್ಪ