ಶನಿವಾರ, ಜೂನ್ 19, 2021
24 °C
ಜಿಲ್ಲೆಯಲ್ಲಿ ಇಂದು– ನಾಳೆ ಭಾರಿ ಮಳೆ ಸಾಧ್ಯತೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಮಳೆ: ಒಡೆದ ‌ಹೆಬ್ಬಾಲೆ ಶಾಲಾ ತಡೆಗೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗಿನಲ್ಲಿ ಶುಕ್ರವಾರ ಹಾಗೂ ಶನಿವಾರ ಭಾರಿ ಮಳೆ ಸುರಿಯುವ ಸಾಧ್ಯತೆಯಿದ್ದು ಜಿಲ್ಲೆಯ ಅಪಾಯಕಾರಿ ಸ್ಥಳದಲ್ಲಿ ನೆಲೆಸಿರುವ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಕೊಡಗಿನ ಸುಂಟಿಕೊಪ್ಪ, ಮಡಿಕೇರಿ, ಗೋಣಿಕೊಪ್ಪಲು, ನಾಪೋಕ್ಲು, ಕುಶಾಲನಗರ ಭಾಗದಲ್ಲಿ ಗುರುವಾರ ಸಂಜೆಯೂ ಧಾರಾಕಾರ ಮಳೆ ಸುರಿದಿದೆ.

ಧಾರಾಕಾರ ಮಳೆ

ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಸುಮಾರು ಎರಡು ಗಂಟೆ ಕಾಲ ಧಾರಾಕಾರವಾಗಿ ಮಳೆ ಸುರಿಯಿತು.

ಹೆಬ್ಬಾಲೆ ವ್ಯಾಪ್ತಿಯಲ್ಲೂ ಜೋರಾಗಿ ಸುರಿದ ಮಳೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆಯ ತಡೆಗೋಡೆ ಕುಸಿದಿದೆ.

ಶಾಲೆಯ ಮೈದಾನ ತುಂಬ ಮಳೆ ನೀರು ತುಂಬಿ ನೀರಿನ‌ ಒತ್ತಡದಿಂದ ಮೈದಾನದ ಒಂದು ಭಾಗದ ತಡೆಗೋಡೆ ಕುಸಿದು ಬಿದ್ದಿದೆ. ತಗ್ಗು ಪ್ರದೇಶದ ಕೃಷಿ ಭೂಮಿಗಳು ಜಲಾವೃತಗೊಂಡ ದೃಶ್ಯ ಕಂಡು ಬಂತು. ಗ್ರಾಮದ ಕನಕ ಬ್ಲಾಕ್‌ನ ಲಕ್ಕಯ್ಯ ಹಾಗೂ ನಯನ ಅವರ ಮನೆಗೆ ಮನೆ ನೀರು ನುಗ್ಗಿ ಹಾನಿಯಾಗಿದೆ.

ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು.‌ ಸಂಜೆ ನಾಲ್ಕು ಗಂಟೆ ಸುಮಾರಿಗೆ ತುಂತುರು ಹನಿಗಳಿಂದ ಮಳೆ ಆರಂಭಗೊಂಡಿತು. ಆಗ ಗುಡುಗು ಮಿಂಚಿನ ಅರ್ಭಟ ಜೋರಾಗಿತ್ತು. ಲಾಕ್‌ಡೌನ್‌ನಿಂದಾಗಿ ಮನೆ ಒಳಗೆ ಬಂದಿಯಾಗಿದ್ದ ಜನರಿಗೆ ಮಳೆಯ ಅರ್ಭಟ ಆತಂಕ ಹುಟ್ಟಿಸಿತ್ತು.ಕೂಡುಮಂಗಳೂರು, ಗುಡ್ಡೆಹೊಸೂರು, ನಂಜರಾಯಪಟ್ಟಣ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ದಲಿಂಗಪುರ ಗ್ರಾಮಗಳ ಕೆಲಕಾಲ ಮಳೆ ಜೋರಾಗಿ ಸುರಿಯಿತು.

ಬಿರುಸಿನ ಮಳೆ

ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ‌ ಧಾರಾಕಾರವಾಗಿ ಮಳೆ ಸುರಿಯಿತು.

ಬೆಳಿಗ್ಗೆನಿಂದ‌ ಉರಿಬಿಸಿಲಿನಿಂದ‌ ಕೂಡಿದ್ದ ವಾತಾವರಣ ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಗುರುವಾರವೂ ಮುಂದುವರಿದಿದೆ.

ಸಂಜೆ 5 ಗಂಟೆ ಸುಮಾರಿಗೆ ಪಟ್ಟಣ ಕತ್ತಲೆಯಿಂದ ಆವರಿಸಿ ದಿಢೀರನೆ ಮಳೆ‌ ಸುರಿಯಿತು.

ಮಾದಾಪುರ, ಬಾಳೆಕಾಡು, ಕಾಂಡನಕೊಲ್ಲಿ, ಮತ್ತಿಕಾಡು, ಮಟತ್ ಕಾಡು, ಉಪ್ಪುತೋಡು ಸೇರಿದಂತೆ ಇತರೆಡೆ ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು