ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲ್ಸ್ ಶಾಲೆ; ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ

Published 30 ಜೂನ್ 2024, 6:00 IST
Last Updated 30 ಜೂನ್ 2024, 6:00 IST
ಅಕ್ಷರ ಗಾತ್ರ

ಮಡಿಕೇರಿ: ಗೋಣಿಕೊಪ್ಪಲಿನ ಕೈಕೇರಿಯಲ್ಲಿರುವ ಕಾಲ್ಸ್ (ಕೆಎಎಲ್‌ಎಸ್‌) ಶಾಲೆಯ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭ ಶನಿವಾರ ಶಾಲೆಯಲ್ಲಿ ನಡೆಯಿತು.

ಶಾಲೆಯ 32 ವಿದ್ಯಾರ್ಥಿ ನಾಯಕರಿಗೆ ಶಾಲೆಯ ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ ಅವರು ಧೈರ್ಯ, ನಾಯಕತ್ವ ಹಾಗೂ ಸಮರ್ಪಣೆಯ ಗುಣಗಳನ್ನು ಬೋಧಿಸಿದರು.

ಡಿವೈಎಸ್‌ಪಿ ಆರ್.ಮೋಹನ್‌ಕುಮಾರ್ ಅವರು ‘ಮಕ್ಕಳಲ್ಲಿ ಶಿಸ್ತು ಮುಖ್ಯ. ಉತ್ತಮ ಹವ್ಯಾಸವನ್ನು ರೂಪಿಸಿಕೊಳ್ಳಬೇಕು. ಮಾತೃಭಾಷೆಯ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಲೆಯ ಆಡಳಿತ ಮಂಡಳಿಯವರಾದ ಅಶ್ವಿನಿ ನಾಚಪ್ಪ ಹಾಗೂ ದತ್ತ ಕರುಂಬಯ್ಯ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT