ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದ ನಡುವೆ ಸ್ವಾವಲಂಬಿ ಬದುಕು

ಅಂಗವಿಕಲತೆ ಮೀರಿ ನಿಂತು ಬದುಕು ಕಟ್ಟಿಕೊಂಡ ರಾಜು
Last Updated 2 ಡಿಸೆಂಬರ್ 2020, 14:50 IST
ಅಕ್ಷರ ಗಾತ್ರ

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಅಂಗಾಂಗಳಲ್ಲಿ ಸಣ್ಣಪುಟ್ಟ ಊನವಾದರೂ ಬದುಕೇ ಮುಗಿಯಿತು ಎಂದು ಕೀಳರಿಮೆಯಿಂದ ಬಳಲುವವರು ಬಹಳ ಜನರಿದ್ದಾರೆ. ಆದರೆ, ಇಂತಹ ಊನವನ್ನು ಸವಾಲಾಗಿ ಸ್ವೀಕರಿಸಿ ಸ್ವತಂತ್ರ ಬದುಕನ್ನು ಕಂಡುಕೊಂಡವರೂ ಇದ್ದಾರೆ. ಇಂತಹ ವಿಕಲಚೇತನರಲ್ಲಿ ಗೋಣಿಕೊಪ್ಪಲು ಬಸ್ ನಿಲ್ದಾಣದ ರಾಜು ಒಬ್ಬರು.

ಅಂದಾಜು 60ರ ಪ್ರಾಯದ ರಾಜುಗೆ ಒಂದು ಎಡಗಾಲು ವಿಕಲತೆಗೆ ಒಳಗಾಗಿದೆ. ಕಂಕುಳಿನ ಊರು ದೊಣ್ಣೆ ಸಹಾಯದಿಂದ ರಾಜು ಒಂದೇ ಕಾಲಿನಲ್ಲಿ ನಡೆಯುತ್ತಾರೆ. ವಿಕಲತೆಗೆ ಒಳಗಾಗಿರುವ ಕಾಲು ಬೆಳೆಯದೇ ತೀರ ಸಣ್ಣದಾಗಿದೆ. ಅದನ್ನು ನೆಲದಲ್ಲಿ ಊರಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಿಲಿ ಕೈಕಟ್ಟಿ ಅಸಹಾಯಕರಾಗಿ ಕುಳಿತ್ತಿಲ್ಲ. ಬದುಕಿಗಾಗಿ ಇನ್ನೊಬ್ಬರನ್ನು ಆಶ್ರಯಿಸಿಲ್ಲ. ಅಥವಾ ಬೇರೆಯವರ ಬಳಿ ಭಿಕ್ಷೆಗಾಗಿ ಎಂದುಗೀ ಕೈ ಚಾಚಿದವರಲ್ಲ.

ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಟೈರ್ ಬದಲಾಯಿಸುವುದು, ಅವುಗಳ ಕೆಳಗೆ ಮಲಗಿ ಸಣ್ಣ ಪುಟ್ಟ ರಿಪೇರಿ ಮಾಡುವುದು, ನೆಟ್ ಬೋಲ್ಟ್ ಸರಿಪಡಿಸುವುದು ಮೊದಲಾದ ಮೆಕ್ಯಾನಿಕಲ್‌ ಕೆಲಸವನ್ನು ಬೆಳಗಿನಿಂದ ಸಂಜೆವರೆಗೂ ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿ ನಿಂತ ಬಸ್‌ಗಳ ಕೆಳಗೆ ಮಲಗಿ ಕೈಯಲ್ಲಿ ಸ್ಕ್ರೂಡ್ರೈವರ್ ಮತ್ತಿತರ ವಸ್ತುಗಳನ್ನು ಹಿಡಿದು ಒಂದಲ್ಲ ಒಂದು ಬಸ್‌ಗಳನ್ನು ರಿಪೇರಿ ಮಾಡುತ್ತಿತ್ತಾರೆ.

ಕಂಕುಳಿಗೆ ಊರು ಗೋಲು ಹಿಡಿದು ಸಂಜೆ ವರೆಗೂ ಗ್ರೀಸ್ ಮತ್ತು ಆಯಿಲ್ ತುಂಬಿದ ಬಟ್ಟೆಯಲ್ಲಿಯೇ ಇರುತ್ತಾರೆ. ಬಸ್‌ಗಳ ಚಾಲಕರು ಮತ್ತು ಕಂಡಕ್ಟರ್‌ಗಳು ರಿಪೇರಿ ಕೆಲಸಕ್ಕೆ ಅನುಗುಣವಾಗಿ ಆತನಿಗೆ ಒಂದುಷ್ಟು ಮಜೂರಿಯನ್ನೂ ಕೊಡುತ್ತಾರೆ. ಈ ಹಣವನ್ನು ವ್ಯರ್ಥಮಾಡದ ರಾಜು ಸ್ವಾಲಂಬಿಯ ಬದುಕಿಗೆ ಬಳಸಿಕೊಂಡಿದ್ದಾರೆ. ಇದರ ಜತೆಗೆ ಸರ್ಕರದ ಒಂದಷ್ಟು ಮಾಸಿಕ ವೇತನವೂ ಬರುತ್ತಿದೆ.

ರಾಜು ಮೂಲತಃ ಕೇರಳದವರು. ಅವರ ಪೋಷಕರು 55 ವರ್ಷಗಳ ಹಿಂದೆಯೇ ಗೋಣಿಕೊಪ್ಪಲಿಗೆ ಕೂಲಿ ಅರಸಿ ಬಂದವರು. 40 ವರ್ಷಗಳಿಂದ ಬಸ್ ನಿಲ್ದಾಣದಲ್ಲಿ ಮೆಕಾನಿಕಲ್‌ ಕೆಲಸ ಮಾಡಿಕೊಂಡಿದ್ದಾರೆ. ಇಷ್ಟು ವರ್ಷವಾದರೂ ರಾಜು ಕನ್ನಡ ಕಲಿತಿಲ್ಲ. ಮಳೆಯಾಳ, ತಮಿಳು, ಕೊಡವ ಮೊದಲಾದ ಎಲ್ಲ ಭಾಷೆಗಳನ್ನು ಮಿಶ್ರಮಾಡಿ ಮಾತನಾಡುತ್ತಾರೆ. ಪತ್ನಿಯನ್ನು ಈಚೆಗೆ ಕಳೆದುಕೊಂಡಿರುವ ಇವರು ತಾವು ದುಡಿದ ಹಣದ ಹಣದಲ್ಲಿ ಮಗನೊಂದಿಗೆ ಸಂತೋಷವಾಗಿ ಜೀವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT