


ಪ್ರತಿಕ್ರಿಯೆಗಳು ಮಂಗಳೂರಿಗೆ ರಾತ್ರಿ ಬಸ್ ಆರಂಭಿಸಲಿ ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ ಇಲ್ಲಿಯವರೆಗೆ ಗ್ರಾಮೀಣ ಸಾರಿಗೆ ಮತ್ತು ದೂರದ ಊರುಗಳಿಗೆ ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಮಂಗಳೂರಿಗೆ ರಾತ್ರಿ ಬಸ್‌ಸಂಚಾರ ಪ್ರಾರಂಭಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.ನಂಗಾರು ಕೀರ್ತಿಪ್ರಸಾದ್ ಕಾಫಿ ಬೆಳೆಗಾರರು ಐಗೂರು ಗ್ರಾಮ
ಸರ್ಮಪಕವಾದ ಬಸ್ ವ್ಯವಸ್ಥೆ ಕಲ್ಪಿಸಿ ಸೋಮವಾರಪೇಟೆ ತಾಲ್ಲೂಕು ಕೇಂದ್ರವಾದರೂ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಹಲವಾರು ಗ್ರಾಮಗಳು ಇಂದಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನೋಡಿಲ್ಲ. ಇನ್ನಾದರೂ ಸಾರಿಗೆ ಸಂಸ್ಥೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.ಎ.ಪಿ.ವೀರರಾಜು ಉದ್ಯಮಿ ಸೋಮವಾರಪೇಟೆ.
ಶೀಘ್ರದಲ್ಲಿ ಬಸ್‌ಸೌಕರ್ಯ ಕಲ್ಪಿಸಿ ಶನಿವಾರಸಂತೆಯಲ್ಲಿ ಬಸ್‌ನಿಲ್ದಾಣ ನಿರ್ಮಿಸಿರುವುದು ಸ್ವಾಗತಾರ್ಹ. ಇದಕ್ಕೆ ತಕ್ಕಂತೆ ಬಸ್‌ಸೌಕರ್ಯವನ್ನು ಮುಂದಿನ ದಿನಗಳಲ್ಲಿ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆಕೆ.ಬಿ.ದಿನೇಶ್ ಕೋಟೆಯೂರು ಗ್ರಾಮ.
ಬೆಂಗಳೂರಿಗೆ ತೆರಳಲು ಇನ್ನಷ್ಟು ಬಸ್ ಬೇಕು ಶನಿವಾರಸಂತೆಯಿಂದ ಬೆಂಗಳೂರಿಗೆ ತೆರಳಲು ಬಸ್ ಸೌಕರ್ಯ ಬೇಕಿದೆ. ಈಗ ಬಸ್ ಸೌಕರ್ಯ ಇದೆ. ಆದರೆ ಇದು ಸಾಕಾಗುತ್ತಿಲ್ಲ. ಹಾಗಾಗಿ ಇನ್ನಷ್ಟು ಹೆಚ್ಚಿನ ಬಸ್‌ಗಳನ್ನು ನಿಯೋಜಿಸಬೇಕು. ಇದರಿಂದ ಬೆಂಗಳೂರಿಗೆ ತೆರಳುವವರಿಗೆ ಅನುಕೂಲವಾಗಲಿದೆ.ಎಸ್.ಬಿ.ಭಾರತ್ ಕುಮಾರ್ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ಗೌಡಳ್ಳಿ.
ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗಲಿ ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಸೌಕರ್ಯ ಕಲ್ಪಿಸಬೇಕು. ಈ ಕೆಲಸ ಆದಷ್ಟು ಶೀಘ್ರದಲ್ಲಿ ಆಗಬೇಕು. ಸಂಬಂಧಪಟ್ಟವರು ಆದಷ್ಟು ಬೇಗ ಗಮನ ಹರಿಸಬೇಕು.ಅರ್ಜುನ್ ಶನಿವಾರಸಂತೆ.
ಡಿಪೊ ಆರಂಭವಾದ ನಂತರ ಹೊಸ್ ಬಸ್ ಶನಿವಾರಸಂತೆ ಸೇರಿದಂತೆ ಅನೇಕ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬೇಕು ಎಂಬ ಬೇಡಿಕೆ ಇದೆ. ಫೆಬ್ರುವರಿ ಮೊದಲ ವಾರದಲ್ಲಿ ಶನಿವಾರಸಂತೆಯಲ್ಲಿ ಹೊಸ ಬಸ್‌ನಿಲ್ದಾಣ ಉದ್ಘಾಟನೆಯಾಗಲಿದೆ. ಕುಶಾಲನಗರದಲ್ಲಿ ಡಿಪೊ ಆರಂಭವಾದ ನಂತರ ಹೊಸ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದುಈರಸಪ್ಪ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಮ್ಯಾನೇಜರ್ ಪುತ್ತೂರು ವಿಭಾಗ.
ಮಾಹಿತಿ: ಎಚ್.ಎಸ್.ಶರಣ್, ಡಿ.ಪಿ.ಲೋಕೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.