ಸಿದ್ದಾಪುರ: ಎಸ್.ಕೆ.ಎಸ್.ಎಸ್.ಎಫ್ ಸಂಘಟನೆ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಸೌಹಾರ್ದ ಕಾಲ್ನಡಿಗೆ ಜಾಥಾ ಅಂಗವಾಗಿ ಮಾನವ ಸರಪಳಿ ನಿರ್ಮಿಸಲಾಯಿತು.

ಇದಕ್ಕೂ ಮೊದಲು ಸಿದ್ದಾಪುರದ ವಿರಾಜಪೇಟೆ ರಸ್ತೆಯಿಂದ ಬಸ್ ನಿಲ್ದಾಣದವರೆಗೆ ಜಾಥಾ ನಡೆಯಿತು. ಮಕ್ಕಳಿಂದ ವಿವಿಧ ರೀತಿಯ ದಫ್ ನೃತ್ಯ ಜಾಥಾಕ್ಕೆ ಮೆರುಗು ನೀಡಿತು.

ಉಪ ಖಾಝಿ ಕೊಡಗು ಜಿಲ್ಲಾ ಸದಸ್ಯರು ಸಮಸ್ತ ಕೇಂದ್ರ ಮುಶಾವರವ ಶ್ಯೆಖುನಾ ಎಂ.ಎಂ. ಅಬ್ದುಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು, ಎಲ್ಲಾ ಧರ್ಮದವರು ಅನ್ಯೋನ್ಯವಾಗಿ ಜೀವನ ಕಂಡುಕೊಳ್ಳಬೇಕು. ಎಲ್ಲರೂ ಕೂಡ ಮಾನವೀಯ ಗುಣಗಳನ್ನು ಬೆಳೆಸಬೇಕು ಎಂದರು.

ಶನಿವಾರಸಂತೆಯ ತಪೋ ಕ್ಷೇತ್ರ ಮನೆಹಳ್ಳಿ ಮಠದ ಸ್ವಾಮೀಜಿ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘ಭಾರತದ ಮಕ್ಕಳಾದ ನಾವು ಒಂದೇ ತಾಯಿಯ ಮಕ್ಕಳಂತೆ ಜೀವನ ಸಾಗಿಸಬೇಕು. ನಮ್ಮ ಹಿರಿಯರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಚೆಟ್ಟಳ್ಳಿಯ ಸೇಂಟ್ ಸಬಸ್ಟಿನ ಚರ್ಚಿನ ಧರ್ಮ ಗುರು ಫಾ. ಜೆರಾಲ್ಡ್ ಸ್ವಿಕೇರಾ, ತಮ್ಲೀಕ್ ಧಾರಿಮಿ ಮಾತನಾಡಿದರು. ಸಂಘಟನೆಯ ಪ್ರಮುಖರಾದ ಶೈಖುನಾ ಉಸ್ಮಾನ್ ಫೈಝಿ, ಅಬ್ದುಲ್ ಕರೀಂ, ಕೆ.ಎಸ್. ಹೈದರ್ ಧಾರಿಮಿ, ಆರಿಫ್ ಫೈಝಿ ಹಾಜರಿದ್ದರು. ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಸುಹೈಬ್ ಫೈಝಿ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.