ಕರಿಮೆಣಸು ಕಳವು; ಮೂವರ ಬಂಧನ

ಗುರುವಾರ , ಜೂಲೈ 18, 2019
29 °C

ಕರಿಮೆಣಸು ಕಳವು; ಮೂವರ ಬಂಧನ

Published:
Updated:
Prajavani

ಸುಂಟಿಕೊಪ್ಪ: ಕರಿಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿಗೆ ಸಮೀಪದ ನಾಕೂರು ಶಿರಂಗಾಲ ಗ್ರಾಮದ ಉದಯ, ವಿನೋದ್, ಟಿ.ಎಂ.ಸುಬ್ಬುರಾಜು ಅಲಿಯಾಸ್ ಸುಬ್ರಮಣಿ ಬಂಧಿತರು. ಆರೋಪಿಗಳಿಂದ ಕದ್ದ ಕರಿಮೆಣಸು ವಶಪಡಿಸಿಕೊಳ್ಳಲಾಗಿದೆ.

ಕಲ್ಲೂರು ಗ್ರಾಮದ ಕಾಫಿ ಬೆಳೆಗಾರ ಸುನೀತ್ ಎಂಬುವವರು ತಮ್ಮ ತೋಟದಲ್ಲಿ ಬೆಳೆದ ಕರಿಮೆಣಸನ್ನು ಕಟಾವು ಮಾಡಿಸಿ, ಗೆಸ್ಟ್‌ಹೌಸ್‌ನ ಕೆಳ ಭಾಗದಲ್ಲಿರುವ ಗೋದಾಮಿನಲ್ಲಿ ಸಂಗ್ರಹಿಸಿಟ್ಟು, ತಂದೆಯ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಿದ್ದರು. ಊರಿಗೆ ಮರಳಿದ ಬಳಿಕ ಕರಿಮೆಣಸಿನ 26 ಚೀಲಗಳು ಕಳವಾಗಿರುವುದು ಗೊತ್ತಾಗಿದ್ದು, ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ₹ 2.25 ಲಕ್ಷ ಮೌಲ್ಯದ 7 ಕ್ವಿಂಟಲ್‌ ತೂಕದ 26 ಚೀಲ ಕರಿಮೆಣಸು, ಕೃತ್ಯಕ್ಕೆ ಬಳಸಿದ ಕಾರೊಂದನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಅಕ್ರಮ ಮಾರಾಟ: ಇಬ್ಬರ ಬಂಧನ
ಸೋಮವಾರಪೇಟೆ:
ಇಲ್ಲಿಗೆ ಸಮೀಪದ ಯಡವಾರೆ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟದಲ್ಲಿ ತೊಡಗಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ, ಇಬ್ಬರು ಆರೋಪಿಗಳನ್ನು ಬಂಧಿಸಿ, ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗ್ರಾಮದ ನಿವಾಸಿ ಒ.ಆರ್.ಶಶಿ ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 4 ಲೀಟರ್ ಮದ್ಯ ಹಾಗೂ ಎನ್.ಜಿ.ಚಂದ್ರಶೇಖರ್ ಅಂಗಡಿಯಲ್ಲಿ ಇಟ್ಟಿದ್ದ 11 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !