ಆ.8ರ ಗುರುವಾರ ರಾತ್ರಿ ಬಾರ್ ಒಂದರಲ್ಲಿ ಮದ್ಯ ಸೇವನೆ ಸಂದರ್ಭ ಹಣಕಾಸಿನ ವಿಚಾರದಲ್ಲಿ ಮೂವರು ಆರೋಪಿಗಳು ಮಹಮ್ಮದ್ ರಿಯಾಜ್ ಎಂಬುವವರ ತಲೆಗೆ ಬೀಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾರೆ. ತಡೆಯಲು ಹೋದ ಅಬೂಬಕರ್ ಸಿದ್ದಿಕ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಸಂದರ್ಭ ತಪ್ಪಿಸಿಕೊಂಡು ಓಡುತ್ತಿರುವಾಗ ಆರೋಪಿಗಳು ಪಟ್ಟಣ ಪಂಚಾಯಿತಿ ಎದುರು ಅಡ್ಡಗಟ್ಟಿ ಸಿದ್ದಿಕ್ ಬೆನ್ನಿನ ಭಾಗಕ್ಕೆ ಚೂರಿಯಿಂದ ಇರಿಯಲಾಗಿದೆ ಎಂದು ರಿಯಾಜ್ ನೀಡಿದ ದೂರಿನನ್ವಯ ಕೊಲೆಯತ್ನ ಪ್ರಕರಣ ದಾಖಲಾಗಿದೆ.