ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರ | ಅನಧಿಕೃತ ಬಂದೂಕು ಬಳಕೆ: ನಾಲ್ವರ ಬಂಧನ

Published 22 ಜೂನ್ 2024, 14:31 IST
Last Updated 22 ಜೂನ್ 2024, 14:31 IST
ಅಕ್ಷರ ಗಾತ್ರ

ಸಿದ್ದಾಪುರ: ಅನಧಿಕೃತವಾಗಿ ಮೀಸಲು ಅರಣ್ಯದಲ್ಲಿ ಬಂದೂಕು ಬಳಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಅಭ್ಯತ್ ಮಂಗಲ ಗ್ರಾಮದ ಯಶೋಧರ (32), ಮರಗೋಡು ಗ್ರಾಮದ ಪ್ರವೀಣ (44), ಅರೆಕಾಡು ಗ್ರಾಮದ ಸುಬ್ಬಯ್ಯ (30) ಹಾಗೂ ಸೋಮಣ್ಣ (31) ಬಂಧಿತರು.

ಈ ನಾಲ್ವರು ಕಾರಿನಲ್ಲಿ ಲಿಂಗಾಪುರ ಮಾರ್ಗವಾಗಿ ಸಿದ್ದಾಪುರಕ್ಕೆ ಬರುತ್ತಿದ್ದ ವೇಳೆ ಲಿಂಗಾಪುರ ಅರಣ್ಯ ತಪಾಸಣಾ ಕೇಂದ್ರದಲ್ಲಿ ತಪಾಸಣೆ‌ ವೇಳೆ ಜೋಡಿ ನಳಿಕೆಯ ಬಂದೂಕು ಹಾಗೂ ಕಾಡತೂಸು ಪತ್ತೆಯಾಗಿದೆ.

ಆನೆಚೌಕೂರು ಉಪವಲಯ ಅರಣ್ಯಾಧಿಕಾರಿ ಚನ್ನವೀರೇಶ್ ಸ್ಥಳಕ್ಕಾಗಮಿಸಿ ದಾಖಲೆ ಪರಿಶೀಸಿದಾಗ ಬಂದೂಕಿಗೆ  ಪರವಾನಗಿ ಇಲ್ಲದೇ ಇರುವುದು ತಿಳಿದುಬಂದಿದೆ. ಬಳಿಕ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT