ಶನಿವಾರ, ಸೆಪ್ಟೆಂಬರ್ 18, 2021
29 °C

ಕಾಡಾನೆ ದಾಳಿ: ಶಾಲೆ ಕಾಂಪೌಂಡ್‌ಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಪಟ್ಟಣದ ಸೆಕ್ರೇಡ್ ಆರ್ಟ್ ವಿದ್ಯಾಸಂಸ್ಥೆಯ ಬಳಿ ಶುಕ್ರವಾರ ಮುಂಜಾನೆ 5.30ರ ಸಮಯದಲ್ಲಿ ಬಂದ ಎರಡು ಕಾಡಾನೆಗಳು ಸಂಸ್ಥೆಯ ಗೇಟ್‌ ಹಾಗೂ ತಡೆಗೋಡೆಯನ್ನು ಕೆಡವಿ ಹಾನಿಗೊಳಿಸಿವೆ.

ಕಾಜೂರು ಗ್ರಾಮದ ಕಡೆಯಿಂದ ಬಂದ ಆನೆಗಳು ಸಂಸ್ಥೆಯ ತಡೆಗೋಡೆ ಹಾಗೂ ಗೆಟ್‌ಅನ್ನು ಬೀಳಿಸಿ ನಂತರ ಚಿಕ್ಕಕೊಳತ್ತೂರು ಗ್ರಾಮದ ರಸ್ತೆಯಲ್ಲಿ ಸಾಗಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಸಂಬಂಧ ಸಂಸ್ಥೆಯ ಫಾದರ್ ಸಜಿ ಅವರು, ಶನಿವಾರಸಂತೆ ವಲಯ ಅರಣ್ಯ ಅಧಿಕಾರಿ ಪ್ರಫುಲ್ ಶೆಟ್ಟಿ ಅವರಿಗೆ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು