ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಯು ಭಾನುವಾರ ರಾತ್ರಿ ಗ್ರಾಮದ ಬಳಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತು.
ಇಲ್ಲಿನ ಎಮ್ಮೆಗುಂಡಿ ರಸ್ತೆಯ ಮೂಲಕ ಬಂದ ಕಾಡಾನೆ ಜನವಸತಿ ಪ್ರದೇಶದ ಮೂಲಕ ಹಾದು ಅಯ್ಯಪ್ಪ ದೇವಾಲಯದ ಮುಂಭಾಗಕ್ಕೆ ಬಂದು ಶಾಂತಗೀರಿ ತೋಟಕ್ಕಾಗಿ ಸಾಗಿದ್ದು ಬಡಾವಣೆ ನಿವಾಸಿಗಳಲ್ಲಿ ಭೀತಿಯನ್ನು ಉಂಟು ಮಾಡಿತ್ತು.
ಆಹಾರ ಅರಸಿ ಬಂದ ಕಾಡಾನೆಯೊಂದು ಎಮ್ಮೆಗುಂಡಿ ರಸ್ತೆಯ ಮೂಲಕ ರಾತ್ರಿಯ ವೇಳೆ ಸುಂಟಿಕೊಪ್ಪದ ಶಿವರಾಂ ರೈ ಬಡಾವಣೆಯಲ್ಲಿ ಮನೆಗಳ ಮುಂದೆ ಸಂಚರಿಸಿದೆ.
ಅದೃಷ್ಟವಶಾತ್ ಈ ಸಂದರ್ಭದಲ್ಲಿ ಜನರ ಓಡಾಟ ಇಲ್ಲದಿರುವುದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ.