ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಟ್ಟಳ್ಳಿಯಲ್ಲಿ ಮಹಿಳೆ ಕೊಲೆ

Published 3 ಜುಲೈ 2024, 4:45 IST
Last Updated 3 ಜುಲೈ 2024, 4:45 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಚೆಟ್ಟಳ್ಳಿಯಲ್ಲಿ ರತ್ನಾ (40) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಇಲ್ಲಿನ ತೋಟವೊಂದರ ಲೈನ್‌ಮನೆಯಲ್ಲಿ ಮಹಿಳೆಯ ಕೊಲೆ ಜೂನ್ 30ರಂದೇ ನಡೆದಿದೆ. ಆದರೆ, ಮಂಗಳವಾರ ಅವರ ದೇಹ ಅವರ ಮನೆಯಲ್ಲೇ ಪತ್ತೆಯಾಗಿದೆ. ಇವರ ಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಒಬ್ಬ ಪುತ್ರಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸದ್ಯ, ಇವರು ಒಬ್ಬರೇ ಮನೆಯಲ್ಲಿದ್ದರು. ಸಮೀಪದಲ್ಲೇ ವಾಸವಿದ್ದ ಪ್ರಸಾದ್ ಎಂಬ ವ್ಯಕ್ತಿ ಸದ್ಯ ನಾಪತ್ತೆಯಾಗಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT