ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯಶಸ್ವಿನಿ ಯೋಜನೆಯಡಿ 2025-26ನೇ ಸಾಲಿಗೆ ಮುಂದುವರೆಸಲು ಅರ್ಹ ಸದಸ್ಯರ ನೋಂದಣಿ ಪ್ರಾರಂಭಿಸಲಾಗಿದೆ.

ಈ ಯೋಜನೆಯಡಿ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯರ ನೊಂದಣಿಗೆ ಮಾರ್ಚ್ 31ರವರೆಗೆ ಅವಕಾಶವಿದೆ

ಜಿಲ್ಲೆಯಲ್ಲಿರುವ ಯಾವುದೇ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್ಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು.

ಅರ್ಜಿ ನಮೂನೆ, ಪಡಿತರ ಚೀಟಿ, ಆಧಾರ್ ಕಾರ್ಡ್, ಯೋಜನೆಗೆ ಒಳಪಡುವ ಸದಸ್ಯರ ಪ್ರತಿಯೊಬ್ಬರ ತಲಾ 2 ಭಾವಚಿತ್ರ, ಗ್ರಾಮೀಣ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಗರಿಷ್ಠ 4 ಸದಸ್ಯರ ಕುಟುಂಬ ಒಂದಕ್ಕೆ ₹ 500 ವಂತಿಕೆ ಹಾಗೂ 4 ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ₹ 100 ಪಾವತಿಸಬೇಕು.

ನಗರ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಗರಿಷ್ಠ 4 ಸದಸ್ಯರ ಕುಟುಂಬ ಒಂದಕ್ಕೆ ₹ 1 ಸಾವಿರ ವಂತಿಕೆ ಹಾಗೂ 4 ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತೀಯೊಬ್ಬ ಹೆಚ್ಚುವರಿ ಸದಸ್ಯರಿಗೆ ₹ 200 ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉಚಿತ.

ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನ. ಕುಟುಂಬದ ಒಬ್ಬ ವ್ಯಕ್ತಿ ಸಂಬಂಧಪಟ್ಟ ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದರೆ ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ನೋಂದಾಯಿತ ಸದಸ್ಯರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ₹ 5 ಲಕ್ಷದವರೆಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.

ಮಾಹಿತಿಗೆ ಚೇತನ್ ಬಿ.ಎಸ್.ಯಶಸ್ವಿನಿ ಜಿಲ್ಲಾ ಸಂಯೋಜಕರು, ಕೊಡಗು ಜಿಲ್ಲೆ, ಮೊ: 9591469497 ನ್ನು ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್.ಡಿ.ರವಿಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.