ಶನಿವಾರ, ಮೇ 8, 2021
18 °C

ಕೆಜಿಎಫ್‌: ನಗರಸಭೆ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ರಾಬರ್ಟಸನ್‌ಪೇಟೆ ನಗರಸಭೆ ಮೇಲೆ ಬುಧವಾರ ಸಂಜೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಧಿಕಾರಿ ಮತ್ತು ಸಿಬ್ಬಂದಿ ಬಳಿ ಇದ್ದ ಅಕ್ರಮ ಹಣ  ಪತ್ತೆ ಹಚ್ಚಿದ್ದಾರೆ.

ಆಯುಕ್ತೆ ಸರ್ವರ್ ಮರ್ಚೆಂಟ್‌ ಬಳಿ ₹38 ಸಾವಿರ ಇತರ ಸಿಬ್ಬಂದಿ ಬಳಿ ಇದ್ದ ₹73 ಸಾವಿರ ಅಕ್ರಮವಾಗಿ ಕಂಡು ಬಂದಿದೆ ಎಂದು ಎಸಿಬಿ ಡಿವೈಎಸ್ಪಿ ಪುರುಷೋತ್ತಮ ತಿಳಿಸಿದರು.

ರಾಬರ್ಟಸನ್‌ಪೇಟೆ ನಗರಸಭೆ ಮೇಲೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಎಸಿಬಿಗೆ ಲಿಖಿತ ದೂರುಗಳು ಬಂದಿದ್ದವು. ನಗರಸಭೆಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಾಗಿತ್ತು. ಸದಾ ಕಾಲ ಆಯುಕ್ತರ ಕಚೇರಿಯಲ್ಲಿ ಮಧ್ಯವರ್ತಿಗಳು ತುಂಬಿರುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಅನಾನುಕೂಲ ಉಂಟಾಗಿತ್ತು. ಇ–ಖಾತೆ ಮಾಡಲು ಲಂಚ ಕೇಳುವುದು, ಆಸ್ತಿ ತೆರಿಗೆ ತೋರಿಸುವಲ್ಲಿ ವ್ಯತ್ಯಾಸ ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡುವುದು, ವ್ಯಾಪಾರಸ್ಥರಿಗೆ ನೀಡುವ ಲೈಸೆನ್ಸ್‌ನಲ್ಲಿ ಕೂಡ ಲಂಚ ಪಡೆಯುವ ಬಗ್ಗೆ ದೂರುಗಳು ಇದ್ದವು.

ಆಯುಕ್ತರ  ಕಾರಿನ ಚಾಲಕನನ್ನು ಕೂಡ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು