ಭಾನುವಾರ, ಮೇ 16, 2021
22 °C

ಕೋಲಾರ ಜಿಲ್ಲೆ ಮಹದೇವಪುರ ಗ್ರಾಮ: ಅನ್ನಭಾಗ್ಯದ್ದು ಅಕ್ಕಿಯೊ, ಗೊಬ್ಬರವೊ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೇತಮಂಗಲ: ಹೋಬಳಿಯ ರಾಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಗ್ರಾಮ ಪಡಿತರ ವಿತರಣೆ ಅಂಗಡಿಯಲ್ಲಿ ದಾಸ್ತಾನಿರುವ ಅನ್ನಭಾಗ್ಯ ಅಕ್ಕಿ ಕಳಪೆಯಾಗಿದೆ.

ಅಕ್ಕಿ ಗಡ್ಡೆಯಂತೆ ಇದೆ. ಇಲ್ಲಿ 300ಕ್ಕೂ ಹೆಚ್ಚು ಪಡಿತರ ಚೀಟಿಗಳಿಗೆ ಅಕ್ಕಿ ವಿತರಣೆ ಮಾಡಲಾಗುತ್ತದೆ. ಮೂರು ದಿನಗಳಿಂದ ಮಾಲೀಕ ಹರೀಶ್  200ಕ್ಕೂ ಹೆಚ್ಚು ಮಂದಿಗೆ ವಿತರಿಸಿದ್ದರು. ಅದು ಚೆನ್ನಾಗಿತ್ತು. ಉಳಿದವರಿಗೆ ವಿತರಿಸಲು ಚೀಲ ತೆರೆದಾಗ ಇದು ಕಂಡು ಬಂದಿದೆ.

ಅಕ್ಕಿ ಸಂಪೂರ್ಣ ಕಳಪೆ ಆಗಿದೆ. ಗಡ್ಡೆ, ಗಡ್ಡೆಗಳಾಗಿ ಕಲ್ಲುಗಳಂತೆ ಗಟ್ಟಿಯಾಗಿದೆ. ಈ ಪಡಿತರ ಕೇಂದ್ರದಿಂದ ವಡ್ರಹಳ್ಳಿ, ಕೆರೆ ಮಿಂಡಹಳ್ಳಿ, ಮಹದೇವಪುರ ಗ್ರಾಮಸ್ಥರಿಗೆ ಪಡಿತರ ವಿತರಿಸಲಾಗುತ್ತದೆ.

ಇತ್ತೀಚೆಗೆ ಸುರಿದ ಮಳೆಯಿಂದ ಈ ರೀತಿ ಆಗಿದೆ ಎನ್ನಲಾಗುತ್ತಿದೆ. ಆದರೆ, ಈ ಅವಘಡ ಪಡಿತರ ಅಂಗಡಿಯಲ್ಲಿ ನಡೆಯಿತೇ ಅಥವಾ ಆಹಾರ ಮತ್ತು ಸರಬರಾಜು ಮಂಡಳಿಯಲ್ಲಿಯೇ ನಡೆಯಿತೆ ಎನ್ನುವುದು ತಿಳಿಯದಾಗಿದೆ.

ಸಮಸ್ಯೆ ಪರಿಹಾರ ಮಾಡಬೇಕು ಎಂದು ಗ್ರಾಮಸ್ಥರು ಅಂಗಡಿ ಬಳಿ ಜಮಾಯಿಸಿದರು. ನಂತರ ಬಂಗಾರಪೇಟೆ ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸೆ.21ರಂದು ಜಿಲ್ಲಾ ಆಹಾರ ಇಲಾಖೆಯ ಅಧಿಕಾರಿಗಳನ್ನು ಕರೆಸಲಾಗುವುದು. ಅಕ್ಕಿ ಬದಲಾವಣೆ ಮಾಡಿಕೊಡಲಾಗುವುದು ಎಂದು ತಾಲ್ಲೂಕು ಅಧಿಕಾರಿ ಶ್ರೀನಿವಾಸ್ ಭರವಸೆ ನೀಡಿದ್ದಾರೆ ಎಂದು ಹರೀಶ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು