ನಂಗಲಿ: ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ. ಗೊಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಭೇಟಿ ನೀಡಿ ದರ್ಶನ ಪಡೆದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಜನರು ನಾನಾ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ವೇಣುಗೋಪಾಲ ಸ್ವಾಮಿ ಜನರ ಕಷ್ಟಗಳನ್ನು ದೂರ ಮಾಡಿ ಕೊರೊನಾವನ್ನು ಆದಷ್ಟು ಬೇಗ ದೂರ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು ಎಂದು ತಿಳಿಸಿದರು.
‘ಮನುಷ್ಯ ಕಷ್ಟಗಳಲ್ಲಿ ಸಿಲುಕಿದಾಗ ದೇವರಿಗೆ ಮೊರೆ ಹೋಗುತ್ತಾನೆ. ಆದ್ದರಿಂದ ದೇವರ ದರ್ಶನ ಪಡೆಯಲಾಯಿತು. ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನ ಯಾವುದೇ ಶುಭ ಕಾರ್ಯಕ್ರಮ ಅಥವಾ ಸಮಾರಂಭ ಮಾಡಲು ದೇವಸ್ಥಾನದ ಆಲಯಗಳು ಸೂಕ್ತ ಸ್ಥಳಗಳಾಗಿವೆ’ ಎಂದು ಹೇಳಿದರು.
ಶಾಸಕ ಎಚ್. ನಾಗೇಶ್, ಮಾಜಿ ಶಾಸಕ ವೈ. ಸಂಪಂಗಿ, ಶ್ರೀಧರ್ ರೆಡ್ಡಿ, ಜಯಚಂದ್ರರೆಡ್ಡಿ, ದೇವಾಲಯದ ಧರ್ಮದರ್ಶಿ ಪ್ರಭಾಕರ್ ರೆಡ್ಡಿ, ಜಿ.ಎ. ಮಧುಸೂಧನ್, ಮೋಹನ್, ಗ್ರಾಮ ಪಂಚಾಯಿತಿ ಸದಸ್ಯ ಅಂಬರೀಶ್, ಸುರೇಶ್ ರಾಜು, ವೃತ್ತ ನಿರೀಕ್ಷಕ ಗೋಪಾಲ ನಾಯಕ್, ಪಿಎಸ್‌ಐ ವಿ. ವರಲಕ್ಷ್ಮಮ್ಮ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.