ಗುರುವಾರ , ಫೆಬ್ರವರಿ 20, 2020
29 °C

ಬ್ಯಾಡ್ಮಿಂಟನ್: ಅಳ್ವಾಸ್ ತಂಡ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದಲ್ಲಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯಿಂದ ಎರಡು ದಿನ ನಡೆದ ರಾಜ್ಯ ಮಟ್ಟದ ಬಾಲ್‌ ಬ್ಯಾಡ್ಮಿಂಟನ್ ಸೀನಿಯರ್ ಲೀಗ್ ಪಂದ್ಯಾವಳಿಯಲ್ಲಿ ಅಳ್ವಾಸ್ ಪುರುಷ ಮತ್ತು ಮಹಿಳೆಯರ ತಂಡಗಳು ಚಾಂಪಿಯನ್‌ ಪಡೆದುಕೊಂಡಿವೆ.

ಪುರುಷ ವಿಭಾಗದಲ್ಲಿ ಅಳ್ವಾಸ್ ತಂಡ, ಮಹಿಳೆಯರ ವಿಭಾಗದಲ್ಲಿ ಅಳ್ವಾಸ್ ತಂಡ (ಎ) ವಿನ್ನರ್, ಪುರುಷ ವಿಭಾಗದಲ್ಲಿ ಬೆಂಗಳೂರಿನ ಕ್ಸಲ್ವಿ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಅಳ್ವಾಸ್ (ಬಿ) ತಂಡದವರು ರನ್ನರ್ ಸ್ಥಾನ ಪಡೆದುಕೊಂಡಿದ್ದಾರೆ.

ಪುರುಷ ವಿಭಾಗದಲ್ಲಿ ಬೆಂಗಳೂರಿನ ಕೆನೆರಾ ಬ್ಯಾಂಕಿನ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ ಬೆಂಗಳೂರು ತಂಡದ ವಿಜಯರ್ ಕುಮಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ಅಳ್ವಾಸ್ ತಂಡದ ಜಯಲಕ್ಷ್ಮಿ ಅತ್ಯುತ್ತಮ್ ಅಟಗಾರರ ಪ್ರಶಸ್ತಿಗಳಿಸಿಕೊಂಡಿದ್ದಾರೆ.

ಧಿಶಾ ಸಮಿತಿ ಸದಸ್ಯ ನಾರಾಯಣಸ್ವಾಮಿ, ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ನಾರಾಯಣಸ್ವಾಮಿ, ಕ್ರೀಡಾಪಟುಗಳಾದ ನವೀನ್ ಕುಮಾರ್, ಪುರುಷೋತ್ತಮ್, ಜಿ.ಬಿ.ನಾಗರಾಜ್, ಶಂಕರ್ ನಾರಾಯಣ, ನಾಗೇಂದ್ರ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು