ನಗರಸಭೆ ಸದಸ್ಯನ ವಿರುದ್ಧ ದೂರು
ಕೆಜಿಎಫ್: ರಾಬರ್ಟಸನ್‌ಪೇಟೆಯ ನಾಡ ಕಚೇರಿ ಬಳಿ ಇರುವ ಅಂಗಡಿಯ ಬಾಗಿಲನ್ನು ಬಲವಂತವಾಗಿ ತೆರೆದು ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ನಗರಸಭೆ ಸದಸ್ಯ ಜರ್ಮನ್ ಜೂಲಿಯಸ್ ವಿರುದ್ಧ ರಾಬರ್ಟಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಡ ಕಚೇರಿ ಬಳಿ ಇರುವ ಅಂಗಡಿಯನ್ನು ಆರ್‌ಪಿಐ ತನ್ನ ಪಕ್ಷದ ಕಾರ್ಯ ಚಟುವಟಿಕೆಗೆ ಬಳಸುತ್ತಿತ್ತು. ಅದರ ಉಸ್ತುವಾರಿಯನ್ನು ಅನ್ಬು ಎಂಬುವರು ನೋಡಿಕೊಳ್ಳುತ್ತಿದ್ದರು. ಅವರು ಮೃತಪಟ್ಟ ನಂತರ ಪಕ್ಷದ ಅಧ್ಯಕ್ಷ ಎಸ್. ರಾಜೇಂದ್ರನ್ ಅವರ ಸುಪರ್ದಿಯಲ್ಲಿತ್ತು.
ಬುಧವಾರ ಜರ್ಮನ್ ಜೂಲಿಯಸ್ ತನ್ನ ಬೆಂಬಲಿಗರೊಡನೆ ಆಗಮಿಸಿ ಅಂಗಡಿ ಬಾಗಿಲು ತೆಗೆದು ಅಂಗಡಿಯಲ್ಲಿದ್ದ ಸುಮಾರು ₹ 50 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಶಾಸಕರೂ ಆದ ಎಸ್. ರಾಜೇಂದ್ರನ್ ದೂರು ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.