ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸರ್ಕಾರಿ ಶಾಲೆ ಮಕ್ಕಳಿಗೆ ಭರಪೂರ ಕೊಡುಗೆ

ಸಿಎಸ್‌ಆರ್‌ ನಿಧಿಯಡಿ ಶಾಲೆಗಳ ಜಿರ್ಣೋದ್ಧಾರಕ್ಕೆ ಮುಂದಾದ ಕಂಪನಿಗಳು
Last Updated 5 ಜುಲೈ 2019, 19:45 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯರು ಬಿಸಿಯೂಟ, ಸಮವಸ್ತ್ರ, ಶೂ ಸೇರಿದಂತೆ ವಿವಿಧ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ಇದೀಗ ಕೈಗಾರಿಕೆ ಹಾಗೂ ಕಂಪನಿಗಳು ಕೂಡ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆ ಹಾಗೂ ಅಲ್ಲಿ ಓದುತ್ತಿರುವ ಮಕ್ಕಳಿಗೆ ವಿವಿಧ ಕೊಡುಗೆ ನೀಡಲು ಮುಂದೆಬಂದಿವೆ.

ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಜತೆಗೆ ಮಕ್ಕಳಿಗೆ ಓದಿಗೆ ಬೇಕಾದ ಅಗತ್ಯ ಪರಿಕರವನ್ನುಒದಗಿಸಲುಸಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಅವಕಾಶವಿದೆ. ಹಾಗಾಗಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿಧ ಯೋಜನೆಯನ್ನು ಕೈಗಾರಿಕೆ ಹಾಗೂ ಕಂಪನಿಗಳು ರೂಪಿಸಿಕೊಂಡಿವೆ. ಖಾಸಗಿ ಶಾಲೆಯಲ್ಲಿ ಸಿಗುವ ಹೆಚ್ಚುವರಿ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳ ಮಕ್ಕಳು ಕೂಡ ಪಡೆಯಬೇಕೆನ್ನುವುದುಆಶಯವಾಗಿದೆ,.

ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ 95ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಫ್ಯೂಚರ್ಸ್‌ ಇಂಡಿಯಾ ಟ್ರಸ್ಟ್‌, ಸ್ಯಾಮಸಂಗ್ ಇಂಡಿಯಾ, ಎಪ್ಸನ್ ಇಂಡಿಯಾ, ಬೆಲೆಸ್ಟ್ರಾ ಇಂಡಿಯಾ ಸೇರಿದಂತೆ ವಿವಿಧ ಕಂಪನಿಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸಮಾಗ್ರಿಗಳನ್ನು ವಿತರಿಸಲು ಮುಂದೆ ಬಂದಿವೆ.

ನೋಟ್‌ ಬುಕ್, ಬೈಂಡ್, ಬ್ಯಾಗ್, ಸಮವಸ್ತ್ರ, ಕಲಿಕಾ ಸಮಾಗ್ರಿಗಳ ಜತೆಗೆ ಶುದ್ಧ ಕುಡಿಯುವ ನೀರಿನ ಯಂತ್ರ, ಕಂಪ್ಯೂಟರ್‌ಗಳನ್ನು ಸಿಎಸ್‌ಆರ್‌ ನಿಧಿಯಡಿ ಒದಗಿಸಲಾಗುತ್ತದೆ. ಅಷ್ಟೇ ಅಲ್ಲ, ಕಟ್ಟಡಗಳನ್ನು ದುರಸ್ಥಿ ಮಾಡಿಕೊಡುವುದಾಗಿ ಕೂಡ ಭರವಸೆ ನೀಡಿವೆ.

ಕಂಪನಿಗಳುಜಿಲ್ಲೆಯ 95 ಸಾವಿರ ಮಕ್ಕಳಿಗೆ ತಲಾ 6ರಂತೆ ಒಟ್ಟು 8 ಲಕ್ಷ ನೋಟ್‌ ಬುಕ್ ವಿತರಿಸಲಿದೆ. ಅಷ್ಟೇ ಅಲ್ಲ, ತಾಲ್ಲೂಕಿನ 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಬೆಂಚ್ ಮತ್ತು ಖುರ್ಚಿ ವಿತರಿಸಲು ಯೋಜನೆ ರೂಪಿಸಿಕೊಂಡಿವೆ.

ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 1ರಿಂದ 3ನೇ ತರಗತಿ ಮಕ್ಕಳಿಗೆ ನಗರದ ಪಿಸಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಹಾವೆಲ್ಲಿ ಮೊಹಲ್ಲಾ ಸರ್ಕಾರಿ ಉರ್ದು ಶಾಲೆ, ತಾಲ್ಲೂಕಿನ ಕೋಡಿಕಣ್ಣೂರು, ಹರಟಿ, ವಿಟ್ಟಪ್ಪನಹಳ್ಳಿ ಶಾಲೆಗೆ ಬೆಂಚ್‌ ಹಾಗೂ ಡೆಸ್ಕ್‌ ವಿತರಿಸಲಾಗಿದೆ.

2ನೇ ಹಂತದಲ್ಲಿ ಟಮಕ, ಕೀಲುಕೋಟೆ, ವೇಮಗಲ್ ಹಾಗೂ ಸೀಸಂದ್ರ ಸೇರಿದಂತೆ ವಿವಿಧ ಶಾಲೆಗಳಿಗೆ ಅಗತ್ಯ ಪಿಠೋಪಕರಣ ನೀಡಲಾಗುತ್ತದೆ.

ಸಿಎಸ್‌ಆರ್‌ ನಿಧಿಯಡಿ ಈಗಾಗಲೇ ತಾಲ್ಲೂಕಿನ ಕೆಂಬೋಡಿ ಪ್ರೌಢ ಶಾಲೆಗೆ ₹85 ಲಕ್ಷ ವೆಚ್ಚದಲ್ಲಿ ತರಗತಿಗಳ ನಿರ್ಮಾಣ, ಕೋಡಿಕಣ್ಣೂರು ಹಾಗೂ ಪಿಸಿ ಬಡಾವಣೆ ಶಾಲೆಗೆ ಟೈಲ್ಸ್, ವಿದ್ಯುತ್ ದುರಸ್ತಿ ಕಾರ್ಯವಾಗಿದೆ. ಕೋಲಾರ ತಾಲ್ಲೂಕಿನ 14,500 ಮಕ್ಕಳಿಗೆ 83 ಸಾವಿರ ನೋಟ್‌ ಪುಸ್ತಕ ಹಾಗೂ ಪರೀಕ್ಷೆ ಬೈಂಡ್ ವಿತರಣೆ ಮಾಡಲಾಗುತ್ತದೆ.

‘ಮಕ್ಕಳಿಗೆ ನೋಟ್‌ ಬುಕ್‌ ಕೊಡಿಸುವ ಹೊರೆ ಪಾಲಕರಿಗೆ ಇಳಿದಂತಾಗಿದೆ. ಅಷ್ಟೇ ಅಲ್ಲ, ಮಕ್ಕಳು ಕೂಡ ಉತ್ಸಾಹದಿಂದ ಕಲಿಯಲು ಸಹಾಯಕಾರಿಯಾಗಿದೆ’ ಎಂದು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT