ಅರಾಭಿಕೊತ್ತನೂರು ಶಾಲೆಯಲ್ಲಿ ನಾಟಕ ಪ್ರದರ್ಶನ

7

ಅರಾಭಿಕೊತ್ತನೂರು ಶಾಲೆಯಲ್ಲಿ ನಾಟಕ ಪ್ರದರ್ಶನ

Published:
Updated:
Deccan Herald

ಕೋಲಾರ: ಕಡೆ ಶ್ರಾವಣ ಶನಿವಾರದ ಅಂಗವಾಗಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ರಚನೆಯ ‘ಮಜ್ಜಿಗೆ ಬಾವಿ’ ಹಾಗೂ ‘ಮರ್ಜಿನ ಮತ್ತು 40 ಕಳ್ಳರು’ ನಾಟಕ ಪ್ರದರ್ಶನ ನಡೆಯಿತು.

ಅರಾಭಿಕೊತ್ತನೂರು ಶಾಲಾ ಮಕ್ಕಳು ಪರಿಸರ ಜಾಗೃತಿಯ ‘ಮಜ್ಜಿಗೆ ಬಾವಿ’ ಹಾಗೂ ಖಾಜಿಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಆಸೆಯೇ ದು:ಖಕ್ಕೆ ಮೂಲವೆಂಬ ಸಂದೇಶ ಸಾರುವ ‘ಮರ್ಜಿನ ಮತ್ತು 40 ಕಳ್ಳರು’ ನಾಟಕ ಪ್ರದರ್ಶಿಸಿದರು.

ಮಜ್ಜಿಗೆ ಮಾರಿ ಬಂದ ಹಣದಿಂದ ಕಟ್ಟಿದ ಬಾವಿ ಕಳೆದುಕೊಂಡ ಅಜ್ಜಿಯ ನೋವಿನ ಕಥಾ ಹಂದರದ ನಾಟಕವು ಪ್ರೇಕ್ಷಕರ ಮನಸೂರೆಗೊಂಡಿತು. ನಾರಾಯಣಸ್ವಾಮಿ ಮತ್ತು ಕೋಟಿಗಾನಹಳ್ಳಿ ಮುನಿರಾಜು ನಿರ್ದೇಶನದ ಈ ನಾಟಕವನ್ನು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದರು. ಹಳ್ಳಿಗಾಡಿನ ಸೊಗಡು, ನೆಲ ಸಂಸ್ಕೃತಿಯ ವೇಶಭೂಷಣದೊಂದಿಗೆ ಮಕ್ಕಳು ಪ್ರೇಕ್ಷಕರ ಮನಗೆದ್ದರು.

ಅರೇಬಿಯನ್ ಸಂಸ್ಕೃತಿಯ ‘ಮರ್ಜಿನ ಮತ್ತು 40 ಕಳ್ಳರು’ ನಾಟಕದಲ್ಲಿ ಮಕ್ಕಳು ಶ್ರೀಮಂತಿಕೆಯ ಆಟಾಟೋಪ, ಬಡವನ ಹೃದಯವಂತಿಕೆಯನ್ನು ಅನಾವರಣಗೊಳಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುನಿಯಪ್ಪ, ಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !