ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ಹಿನ್ನಡೆ ಅನುಭವಿಸಿದ ಬಿಜೆಪಿ

Last Updated 1 ಜೂನ್ 2019, 9:59 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಯಲ್ಲಿ ಪಾರುಪತ್ಯ ಮೆರೆದಿದ್ದ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ.

ಜಿಲ್ಲೆಯ ಮೂರು ಪುರಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶಶುಕ್ರವಾರ ಪ್ರಕಟವಾಗಿದೆ. ಇದರಲ್ಲಿ ತಲಾ ಒಂದು ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಉಳಿದ ಒಂದು ಕ್ಷೇತ್ರಅತಂತ್ರ ಸ್ಥಿತಿಯಲಿದೆ.

ಮಾಲೂರಿನಲ್ಲಿ ಒಟ್ಟು 27 ವಾರ್ಡ್‌ಗಳಿಂದ 79 ಮಂದಿ ಹಾಗೂ ಬಂಗಾರಪೇಟೆಯ 27 ವಾರ್ಡ್‌ನಿಂದ 80 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶ್ರೀನಿವಾಸಪುರದ 23 ವಾರ್ಡ್‌ಗಳಿಗೆ 87 ಜನ ಅಭ್ಯರ್ಥಿಗಳುಕಣದಲ್ಲಿದ್ದರು.

ಶ್ರೀನಿವಾಸಪುರ ಪುರಸಭೆ ಚುನಾವಣೆಯಲ್ಲಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ 8 ಸ್ಥಾನ ಪಡೆದುಕೊಂಡಿದೆ. ಈ ಕ್ಷೇತ್ರದಲ್ಲಿಜೆಡಿಎಸ್ 11 ಸ್ಥಾನವನ್ನು ಗೆದ್ದರೂ ಸಹಿತ ಬಹುಮತಕ್ಕೆ ಒಂದು ಸ್ಥಾನ ಕೊರತೆಯಿದೆ. ಹಾಗಾಗಿ ವಿಜೇತರಾಗಿರುವನಾಲ್ಕು ಮಂದಿ ಸ್ವತಂತ್ರ ಅಭ್ಯರ್ಥಿಗಳಲ್ಲಿ ಇಬ್ಬರನ್ನು ಸೆಳೆಯುವ ಯತ್ನದಲ್ಲಿ ಜೆಡಿಎಸ್ ಇದೆ.

ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಪ್ರತಿನಿಧಿಸುತ್ತಿರುವ ಮಾಲೂರು ಪುರಸಭೆಯಲ್ಲಿ 27 ವಾರ್ಡ್‌ಗಳಿದ್ದು, ಕಾಂಗ್ರೆಸ್ 11, ಬಿಜೆಪಿ 10, ಜೆಡಿಎಸ್ 1 ಹಾಗೂ ಪಕ್ಷೇತರರು 5 ಸ್ಥಾನಗಳಿಸಿದ್ದಾರೆ. ಅಧಿಕಾರದಚುಕ್ಕಾಣಿ ಹಿಡಿಯಲುಯಾವುದೇ ಪಕ್ಷಕ್ಕೆ ಬಹುಮತ ದೊರೆತಿಲ್ಲ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಪಕ್ಷೇತರ ಸದಸ್ಯರನ್ನು ಸೆಳೆಯುವ ಯತ್ನದಲ್ಲಿದ್ದಾರೆ.

ಮಾಲೂರು ಪುರಸಭೆಯ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಸುಮಿತ್ರಾ 373 ಮತಗಳ ಅಂತರದಲ್ಲಿ ಜಯಗಳಿಸುವ ಮೂಲಕ ಗಮನಸೆಳೆದಿದ್ದಾಳೆ.

ಕಾಂಗ್ರೆಸ್ ಶಾಸಕ ಎಸ್‌.ಎನ್. ನಾರಾಯಣಸ್ವಾಮಿ ಪ್ರತಿನಿಧಿಸುತ್ತಿರುವ ಬಂಗಾರಪೇಟೆ ಪುರಸಭೆಯಲ್ಲಿ 27 ವಾರ್ಡ್‌ಗಳಿದ್ದು, ಕಾಂಗ್ರೆಸ್ 20, ಜೆಡಿಎಸ್ 2 ಪಕ್ಷೇತರ 4 ಹಾಗೂ ಬಿಜೆಪಿ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಹಾಗಾಗಿಕಾಂಗ್ರೆಸ್‌ಗೆಸ್ಪಷ್ಟ ಬಹುಮತ ದೊರೆತಿದೆ.

ಕಳೆದ ಬಾರಿ ಮಾಲೂರಿನಲ್ಲಿ ಬಿಜೆಪಿ, ಬಂಗಾರಪೇಟೆ ಹಾಗೂ ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

ಅಂಕಿ–ಅಂಶ

ವಾರ್ಡ್‌; 77
ಕಾಂಗ್ರೆಸ್; 39
ಜೆಡಿಎಸ್; 14
ಬಿಜೆಪಿ; 11
ಪಕ್ಷೇತರರು; 13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT