ಗುರುವಾರ , ಮೇ 19, 2022
20 °C

9 ಗ್ರಾ.ಪಂ ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಗೆ ಬುಧವಾರ ಚುನಾವಣೆ ಶಾಂತಿಯುತವಾಗಿ ನಡೆಯಿತು.

ಚುನಾವಣಾ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಆಯಾ ಗ್ರಾ.ಪಂ ಕಚೇರಿಗಳಲ್ಲಿ ಸುಸೂತ್ರವಾಗಿ ಚುನಾವಣೆ ನಡೆಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದವರು ಬೆಂಬಲಿತ ಸದಸ್ಯರೊಂದಿಗೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.

ಅಣ್ಣಿಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಎನ್‌.ಮಂಜುನಾಥ್‌ಗೌಡ ಮತ್ತು ಉಪಾಧ್ಯಕ್ಷರಾಗಿ ಆರ್‌.ಮುನಿರತ್ನ, ಶಾಪೂರು ಗ್ರಾ.ಪಂ ಅಧ್ಯಕ್ಷರಾಗಿ ಮಂಜುಳಾ ಹಾಗೂ ಉಪಾಧ್ಯಕ್ಷರಾಗಿ ಎ.ಎನ್‌.ಸಂಪತ್‌ಕುಮಾರ್‌, ಕೊಂಡರಾಜನಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಎನ್‌.ಪುಷ್ಪಮ್ಮ ಮತ್ತು ಎನ್‌.ನಾಗೇಶ್‌ ಗೆಲುವು ಸಾಧಿಸಿದರು.

ವಕ್ಕಲೇರಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಎನ್‌.ಮುರಳಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಎಂ.ಚಿನ್ನಮ್ಮ, ಬೆಳ್ಳೂರು ಗ್ರಾ.ಪಂ ಅಧ್ಯಕ್ಷರಾಗಿ ಬಿ.ವಿ.ವೆಂಕಟಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಎಂ.ಮಮತಾ, ಅರಹಳ್ಳಿ ಗ್ರಾ.ಪಂ ಅಧ್ಯಕ್ಷಗಾದಿಗೆ ಕೆ.ಎಂ.ನಾರಾಯಣಸ್ವಾಮಿ ಮತ್ತು ಉಪಾಧ್ಯಕ್ಷಗಾದಿಗೆ ವೈ.ದಾಕ್ಷಿಯಿಣಿ ಆಯ್ಕೆಯಾದರು.

ಜನ್ನಘಟ್ಟ ಗ್ರಾ.ಪಂ ಅಧ್ಯಕ್ಷರಾಗಿ ವಿ.ಸತೀಶ್‌ಮೂರ್ತಿ ಮತ್ತು ಉಪಾಧ್ಯಕ್ಷರಾಗಿ ವಿದ್ಯಾ, ಕ್ಯಾಲನೂರು ಗ್ರಾ.ಪಂ ಅಧ್ಯಕ್ಷಗಾದಿಗೆ ವಿ.ಚೈತ್ರಾ ಹಾಗೂ ಉಪಾಧ್ಯಕ್ಷಗಾದಿಗೆ ರತ್ನಮ್ಮ, ಸೀತಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಕೆ.ಸೀತಾಲಕ್ಷ್ಮೀ ಉಪಾಧ್ಯಕ್ಷ ಸ್ಥಾನಕ್ಕೆ ಎನ್‌.ಮಂಜುಳಾ ಆಯ್ಕೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.